ಭಟ್ಕಳ : ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯ ಶಿವಶಾಂತಿಕಾ (ದುರ್ಗಾ) ಪರಮೇಶ್ವರಿ ದೇವಸ್ಥಾನಕ್ಕೆ ಶಿವರಾತ್ರಿಯ ಅಂಗವಾಗಿ ಬೆಳಗಿನ ಜಾವ ಸ್ಥಳೀಯರು ಲೋಕಕಲ್ಯಾಣಾರ್ಥವಾಗಿ 5ನೇ ವರ್ಷದ ಪಾದಯಾತ್ರೆ ನಡೆಸಿದರು.
ಇದನ್ನೂ ಓದಿ : ಸಮುದ್ರದಲ್ಲಿ ಕೃತಕ ಬಂಡೆಸಾಲುಗಳ ಅಳವಡಿಕೆಗೆ ಚಾಲನೆ
ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ಮಹಾವಿಷ್ಣುಮೂರ್ತಿ ಗಣಪತಿ ದೇವಸ್ಥಾನದಿಂದ ಹೊರಟು ದೇವಿಮನೆಯಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವಿಡಿಯೋ ನೋಡಿ : ಸಮುದ್ರದಲ್ಲಿ ಈಜಾಡಿದ ಸಚಿವ ಮಂಕಾಳ ವೈದ್ಯ https://fb.watch/qIWtfxAktN/?mibextid=Nif5oz
ಪಾದಯಾತ್ರೆ ಸಂದರ್ಭದಲ್ಲಿ ಮತ್ತು ದೇವಸ್ಥಾನದಲ್ಲಿ ಪಂಚಾಕ್ಷರಿ ಜಪ ಮಾಡಲಾಯಿತು. ಪಾದಯಾತ್ರೆಗೆ ಭಟ್ಕಳದ ನಾಗರಾಜ ಭಟ್ಟ ಅವರ ತಂಡದಿಂದ ಚಂಡೆ ವಾದನ ಸೇವೆ ಮೆರಗು ನೀಡಿತು. ದೇವಿಮನೆಯಲ್ಲಿ ಭಕ್ತರನ್ನುದ್ಧೇಶಿಸಿ ಅರ್ಚಕ ವೇ.ಮೂ. ಬಾಲಚಂದ್ರ ಭಟ್ಟ ಶಿವರಾತ್ರಿಯ ಆಚರಣೆಯ ಮಹತ್ವದ ಕುರಿತು ಮಾತನಾಡಿ, ಶಿವರಾತ್ರಿ ಪಾದಯಾತ್ರೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಪಿ ಟಿ ಚವಾಣ, ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹೆಗಡೆ, ಉಪಾಧ್ಯಕ್ಷರಾದ ಜಯರಾಮ ಶೆಟ್ಟಿ, ಸೋಮಶೇಖರ ನಾಯ್ಕ, ಸಂಘಟನಾ ಕಾರ್ಯದರ್ಶಿ ರವಿ ನಾಯ್ಕ, ಖಚಾಂಚಿ ನಾಗೇಶ ದೇವಡಿಗ, ಮಾರುಕೇರಿ ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಗೊಂಡ, ಗ್ರಾ.ಪಂ. ಉಪಾಧ್ಯಕ್ಷ ಎಂ ಡಿ ನಾಯ್ಕ, ಸದಸ್ಯರಾದ ನಾರಾಯಣ ಗೊಂಡ, ಸುಧಾ ಹೆಗಡೆ, ಮೋಹಿನಿ ಗೊಂಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ರೇವತಿ ನಾಯ್ಕ, ಗಜಾನನ ಹೆಬ್ಬಾರ, ಮಹೇಶ ಶೆಟ್ಟಿ ಸೇರಿದಂತೆ ಹಲವರಿದ್ದರು. ಈ ಸಲದ ಪಾದಯಾತ್ರೆಯಲ್ಲಿ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.