ಭಟ್ಕಳ: ಸೆ 10 ಮತ್ತು 11ರಂದು ತಾಲೂಕಿನ ಬೈಲೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ಭಟ್ಕಳ (Bhatkal) ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ (Sports Meet) ಆನಂದ ಆಶ್ರಮ ಪ್ರೌಢಶಾಲೆ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ಉತ್ತರ ಕನ್ನಡ (Uttara Kannada) ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕು ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕ್ರೀಡಾಕೂಟದದಲ್ಲಿ ಹೆಣ್ಣು ಮಕ್ಕಳ ವೈಯಕ್ತಿಕ ಸ್ಪರ್ಧೆಯಲ್ಲಿ ಶ್ರೇಯಾ ನಾಯ್ಕ-ಗುಂಡು ಎಸೆತ ಮತ್ತು ಜಾವಲಿನ ಎಸೆತ ಪ್ರಥಮ, ಹ್ಯಾಮರ್ ಥ್ರೋ ತೃತೀಯ; ಮೋನಿಷಾ ನಾಯ್ಕ- ಉದ್ದ ಜಿಗಿತ ಪ್ರಥಮ, ನಿಭಾ ಬೋರ್ಕರ್-ಹ್ಯಾಮರ್ ತ್ರೋ ಪ್ರಥಮ; ಯಶಸ್ವಿನಿ ನಾಯ್ಕ-ಕರಾಟೆ ಪ್ರಥಮ, ತ್ರಿಪಲ್ ಜಂಪ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನು ಓದಿ: Cattle bones/ ಗುಡ್ಡದಲ್ಲಿ ಜಾನುವಾರು ಮೂಳೆಗಳು, ಅಸ್ತಿಪಂಜರಗಳು ಪತ್ತೆ
ಗಂಡು ಮಕ್ಕಳ ವೈಯಕ್ತಿಕ ಸ್ಪರ್ಧೆಯಲ್ಲಿ ಇಲಾನ್ ಗುಂಡು ಎಸೆತ ಪ್ರಥಮ; ಶಿವಪ್ರಸಾದ ನಾಯ್ಕ -ಚೆಸ್ ಪ್ರಥಮ; ಬಿ ವಿ ರಾಹುಲ್- ಕರಾಟೆ ಪ್ರಥಮ; ಯಶಸ್ ಮೊಗೇರ- ಕರಾಟೆ ಪ್ರಥಮ, 400 ಮೀಟರ್ ಓಟ ತೃತೀಯ; ಕುಮಾರ ವಜ್ರ ನಾಯ್ಕ- ಕರಾಟೆ ಪ್ರಥಮ; ಅನುಮ್-ಕರಾಟೆ ಪ್ರಥಮ ಪಡೆದುಕೊಂಡಿದ್ದಾರೆ.
ಇದನ್ನು ಓದಿ: Honour/ ಭಟ್ಕಳದ ಸಾಧಕರಿಗೆ ಹೊನ್ನಾವರದಲ್ಲಿ ಸನ್ಮಾನ
ತಾಲೂಕು ಮಟ್ಟದ ಗುಂಪು ಆಟಗಳಲ್ಲಿ–ಬಾಲಕರ ಕಬ್ಬಡ್ಡಿ-ಯಶವಂತ ಮತ್ತು ತಂಡದವರು ಪ್ರಥಮ ಸ್ಥಾನ, ಬಾಲಕರ ಬಾಲ್ ಬ್ಯಾಡ್ಮಿಂಟನ್- ಪ್ರಥಮ್ ಮತ್ತು ಸಂಗಡಿಗರು ಪ್ರಥಮ ಸ್ಥಾನ, ಬಾಲಕರ ಶೆಟಲ್ ಬ್ಯಾಡ್ಮಿಂಟನ್–ಅಯಾನ್ ಮತ್ತು ಸಂಗಡಿಗರು ಪ್ರಥಮ, ಬಾಲಕರ-ಬಾಲಕೀಯರ ತ್ರೋಬಾಲ್-ದ್ವಿತೀಯ, ಬಾಲಕಿಯರ ವಾಲಿಬಾಲ್ ದ್ವಿತೀಯ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ -ದ್ವಿತೀಯ, ಬಾಲಕಿಯರ ಶೆಟ್ಟಲ್ ಬ್ಯಾಡ್ಮಿಂಟನ್-ದ್ವಿತೀಯ ಸ್ಥಾನ ಪಡೆದಿದ್ದಾರೆ. ಕ್ರೀಡಾಕೂಟದಲ್ಲಿ (sports meet) ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಮಹೇಶ ನಾಯ್ಕ ತರಬೇತಿ ನೀಡಿದ್ದರು.
ಇದನ್ನು ಓದಿ: Municipal Council/ ನಗರಸಭೆಗೆ ಇನ್ನಷ್ಟು ಗ್ರಾ ಪಂ ಸೇರಿಸಲು ಅಭ್ಯಂತರವಿಲ್ಲ: ಮಂಕಾಳ ಎಸ್ ವೈದ್ಯ



