ಭಟ್ಕಳ : ಶಾರೀರಿಕ ಮತ್ತು ಮಾನಸಿಕವಾಗಿ ಸಧೃಢರಾಗಲು ಯೋಗ  ಸಹಕಾರಿ ಎಂದು ಶ್ರೀ ಗುರು ವಿದ್ಯಾಧಿರಾಜ ಪಿಯು ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ  ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಹೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅವರು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗವು ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಮತ್ತು ಒತ್ತಡ  ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಬಿರುಸಿನಿಂದ ಸುರಿಯುತ್ತಿರುವ ಆರ್ದ್ರಾ ಮಳೆಗೆ ಅಲ್ಲಲ್ಲಿ ಹಾನಿ

ವಿದ್ಯಾರ್ಥಿನಿಯರಾದ ಶಾಂಭವಿ ಮೊಗೇರ ಮತ್ತು ಶ್ರೇಯಾ ನಾಯ್ಕ ಯೋಗದ ಆಸನಗಳ ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾಧಿರಾಜ ಮಹಾವಿದ್ಯಾಲಯದ ಸಾಂಸ್ಕ್ರತಿಕ ಸಂಯೋಜಕ ನಾಗೇಂದ್ರ ಪೈ ನಿರೂಪಿಸಿದರು.