ಭಟ್ಕಳ : ತಾಲೂಕಿನ ಶಿರಾಲಿ ಅಳ್ವೆಕೋಡಿ ಸಣಬಾವಿಯ ವಿಶ್ವಶಕ್ತಿ ದೇವಸ್ಥಾನದ ಆರ್ಕಟಿಮನೆ ದೇವಿದಾಸ ಸ್ವಾಮಿಗಳು ಮತ್ತು ಅವರ ಕುಟುಂಬಿಕರು ಪೂಜಿಸಿಕೊಂಡು ಬರುತ್ತಿರುವ ನಾಗಬನದಲ್ಲಿ ಮಾರ್ಚ್ ೧೫ರಿಂದ 21ರ ವರೆಗೆ ಷೋಡಶ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ಇದನ್ನೂ ಓದಿ : ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ಜಾತ್ರೆ ಮಾ.೧೫ರಿಂದ

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಲ್ಲದೇ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ್ರಮುಖ ವಿಠಲ್‌ ದೈಮನೆ, ೨೦೨೨ರಲ್ಲಿ ಆರ್ಕಟಿಮನೆ ದೇವಿದಾಸ ಸ್ವಾಮಿಗಳ ನೇತೃತ್ವದಲ್ಲಿ ವಿಶ್ವಶಕ್ತಿ ದೇವಸ್ಥಾನ ನಿರ್ಮಿಸಲಾಗಿದೆ. ಶ್ರೀ ದೇವಿಯ ಪ್ರೇರಣೆಯಿಂದ ಸ್ಥಳದ ನಾಗಬನದಲ್ಲಿ ಲೋಕಕಲ್ಯಾಣಾರ್ಥವಾಗಿ ಷೋಡಶ ಪವಿತ್ರ ನಾಗಮಂಡಲ ನಡೆಸಲು ನಿರ್ಧರಿಸಲಾಗಿದೆ ಎಂದರು.

ಈ ವಿಡಿಯೋ ನೋಡಿ : ಈಶ್ವರಪ್ಪ ಗರಂ  https://www.facebook.com/share/r/aJgtC1J6vt5svScv/?mibextid=oFDknk

ನಾಗಮಂಡಲೋತ್ಸವ ಕಾರ್ಯಕ್ರಮ ವೇ. ಮೂ. ನಾಗರಾಜ ಪುತ್ರಾಯ, ವೇ.ಮೂ. ಮುರಳಿಧರ ಪುತ್ರಾಯ, ವೇ.ಮೂ. ಲಕ್ಷ್ಮೀಪ್ರಸಾದ ಭಟ್ ಸಂತ್ಯಾರು ಅವರ ಆಚಾರ್ಯತ್ವದಲ್ಲಿ ಮತ್ತು ವೇ.ಮೂ. ಕುಮಾರ ಶಾಸ್ತ್ರಿಯವರ ಸಹಭಾಗಿತ್ವದಲ್ಲಿ ನಡೆಯಲಿದೆ. ನಾಗಪಾತ್ರಿ ವೇ.ಮೂ. ಶಂಕರನಾರಾಯಣ ಬಾಯರಿ ಗೋಪಾಡಿ, ವೈದ್ಯರಾಗಿ ವಾಸುದೇವ ವೈದ್ಯ ಬಳಗ ಗೋಳಿ ಅಂಗಡಿ ಹಾಗೂ ಕೃಷ್ಣಪ್ರಸಾದ ಬಳಗ ಮುದ್ದೂರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಾ. ೧೫ರಂದು ಬೆಳಗ್ಗೆ ೯.೩೦ಕ್ಕೆ ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ, ಮಾ. ೧೬ರಂದು ಹರಿಹರಪುರದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಮಾ. ೧೭ರಂದು ಬೆಳಗ್ಗೆ ೯.೩೦ ಗಂಟೆಗೆ ಉಜಿರೆಯ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸಂಜೆ ೩.೩೦ಕ್ಕೆ ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಮಾ. ೧೮ರಂದು ಬೆಳಗ್ಗೆ ೯.೩೦ ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಮಾ. ೧೯ರಂದು ಬೆಳಗ್ಗೆ ಹಂಗಾಕಟ್ಟೆ ಬಾಳೆಕುಂದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಮಾ. ೨೦ರಂದು ಬೆಳಗ್ಗೆ ಮಂಡ್ಯದ ಜೈನ ಮಠದ ಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಕಾರ್ಯಕ್ರಮದ ಅಷ್ಟೂ ದಿನವೂ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಾರಾಯಣ ಮೊಗೇರ ಆರ್ಕಟಿಕಮನೆ, ಕುಮಾರ ಹೆಬಳೆ, ಪತ್ರಕರ್ತ ಸುಬ್ರಹ್ಮಣ್ಯ ಭಟ್ ದಾಸನಕುಡಿಗೆ ಉಪಸ್ಥಿತರಿದ್ದರು