ಹೊನ್ನಾವರ: ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಶಾಂತತಾ ಭಂಗ ಮಾಡಿರುವ ಬಗ್ಗೆ ಹೊನ್ನಾವರ (Honnavar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ರವಿ ಹನುಮಂತ ನಾಯ್ಕ ದೂರು ದಾಖಲಿಸಿದ್ದಾರೆ. ಕಾರು ಚಾಲಕ ಶಿರಾಲಿ ಚಿತ್ರಾಪುರದ ರಾಘವೇಂದ್ರ ತಂದೆ ರಾಮಚಂದ್ರ ನಾಯ್ಕ (೩೫),  ಹೊನ್ನಾವರ ತಾಲೂಕಿನ ಕಾಸರಗೋಡ ಟೊಂಕಾ ನಿವಾಸಿಗಳಾದ ಮಹಮ್ಮದ ಜುನೈದ್ ತಂದೆ ಬಾಬುಲ್ ಸಾಬ (೨೯),  ಫಯಾಜ್ ಅಬೂಬಕರ ಸಯ್ಯದ್ (೩೫),  ಸುಲೇಮಾನ್ ತಂದೆ ಹಸನ ಸಾಹೇಬ (೪೨)ಹಾಗೂ ಇನ್ನೂ ೨-೩ ಜನರು ಆರೋಪಿತರು.

ಇದನ್ನು ಓದಿ: Bike skid/ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್: ಇಬ್ಬರು ಗಂಭೀರ 

ಫೆಬ್ರವರಿ ೮ರಂದು ಕಾಸರಕೋಡು ಟೊಂಕಾದ ಬಳಿ ಈ ಹೊಡೆದಾಟ ನಡೆದಿದೆ. ಪೊಲೀಸ್ ಸಿಬ್ಬಂದಿ ರವಿ ಹನುಮಂತ ನಾಯ್ಕ ಅವರು ಈ ಹೊಡೆದಾಟ ನೋಡಿದ್ದಾರೆ. ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ ನಡೆಸಿದವರ ವಿರುದ್ಧ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: Makkala Santhe/ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಸಂತೆ 

ಆರೋಪಿತರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸ್ಕೂಟಿ ಸವಾರ ಹಾಗೂ ಕಾರಿನಲ್ಲಿದ್ದವರ ನಡುವೆ ನಡೆದ ಹೊಡೆದಾಟಕ್ಕೆ ಮತ್ತೆ ಮೂವರು ಕೈ ಜೋಡಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲ ವಾತಾವರಣ ಸೃಷ್ಠಿಯಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು.

ವಿಡಿಯೋ ಸಹಿತ ಇದನ್ನು ಓದಿ: Chariot festival/ ಭಟ್ಕಳದ ಸೋನಾರಕೇರಿಯಲ್ಲಿ ರಥೋತ್ಸವ ವೈಭವ

ಪೊಲೀಸ್ ಸಿಬ್ಬಂದಿ ರವಿ ನಾಯ್ಕ ಅವರು ಹೊಡೆದಾಟದಲ್ಲಿ ಭಾಗವಹಿಸಿದ ಎಲ್ಲರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅವರೆಲ್ಲರ ಹೆಸರು ಸೇರಿಸಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನು ಓದಿ: car collided/ ಮಹಿಳೆ ಚಲಾಯಿಸುತ್ತಿದ್ದ ಕಾರು ಮೋಟಾರ ಸೈಕಲ್ಲಿಗೆ ಡಿಕ್ಕಿ: ಅರ್ಚಕ ಆಸ್ಪತ್ರೆಗೆ