ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ರವಿವಾರ ಸಂಜೆ ನಡೆದಿದೆ. ಭಟ್ಕಳದ ಆಜಾದ್ ನಗರ ನಿವಾಸಿ ಇಸ್ಮಾಯಿಲ್ ಮೊಹ್ಮದ ಬರ್ಮಾವರ್ (24) ಮತ್ತು ಹಾವೇರಿ ಜಿಲ್ಲೆ ಹಿರೇಕೆರೂರು ಮೂಲದ ಖಲೀಲ್ ತಂದೆ ನದೀಮ್ (13) ಮೃತಪಟ್ಟ ದುರ್ದೈವಿಗಳು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಡ್ಲೆಕೊಪ್ಪದ ಶಿರವಾಳ ರಸ್ತೆಯಲ್ಲಿ ಇರುವ ಜಾಮಿಯಾ ದಾರುಲ್ ಫಲಾ ಮದರಸಾದಲ್ಲಿ ೨೫ ದಿನಗಳ ಬೇಸಿಗೆ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರಾರ್ಥಿಗಳಿಗೆ ಇಂದು ರವಿವಾರ ಭಟ್ಕಳ ಮತ್ತು ಮುರುಡೇಶ್ವರ ಪ್ರವಾಸ ಆಯೋಜಿಸಲಾಗಿತ್ತು.

ಸುಮಾರು 18 ಯುವಕರು ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಇವರಿಗೆ ಭಟ್ಕಳ ಮೂಲದ ಮೃತ ಯುವಕ ಇಸ್ಮಾಯಿಲ್ ಮೊಹ್ಮದ ಬರ್ಮಾವರ್ ಸ್ನೇಹಿತನಾಗಿದ್ದನು. ೧೮ ಜನ ಯುವಕರೊಂದಿಗೆ ಮೊಹ್ಮದ್ ಬರ್ಮಾವರ್ ರವಿವಾರ ಮುರುಡೇಶ್ವರಕ್ಕೆ ತೆರಳಿದ್ದು. ಸಂಜೆ ವೇಳೆ ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ನಾಲ್ಕು ಯುವಕರು ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದು, ಇಬ್ಬರ ರಕ್ಷಣೆ ಮಾಡಲಾಗಿದೆ. ಇನ್ನಿಬ್ಬರು ಸಮುದ್ರದಲ್ಲಿ ಮುಳುಗಿ ನೀರು ಪಾಲಾಗಿದ್ದರು. ಯುವಕರನ್ನು ದೋಣಿಯ ಸಹಾಯದಿಂದ ದಡಕ್ಕೆ ಕರೆ ತಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವನ್ನಪ್ಪಿದ್ದಾರೆ.
ಘಟನ ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ‘ಮೋದಿಗಾಗಿ ಬೃಹತ್ ಬೈಕ್ ಜಾಥಾ’ಗೆ ಚಾಲನೆ