ಭಟ್ಕಳ: ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ಅಡ್ಡೆಗೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ (arrested). ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ಮುಟ್ಟಳ್ಳಿಯ ಸುಕ್ರಪ್ಪ ತಂದೆ ಕನ್ನಯ್ಯ ನಾಯ್ಕ (೬೦) ಮತ್ತು ಜಾಲಿಕೋಡಿಯ ಪುರುಷೋತ್ತಮ ತಂದೆ ಮಂಜುನಾಥ ನಾಯ್ಕ (೩೬) ಬಂಧಿತರು(arrested). ಇವರು ದಿನಾಂಕ: ೦೫-೦೨-೨೦೨೬ರಂದು ಸಾಯಂಕಾಲ ೦೭:೦೫ ಗಂಟೆಗೆ ಭಟ್ಕಳ ತಾಲೂಕಿನ ಕೋಣಾರ ಗ್ರಾಮದ ಕೆರೆಹಿತ್ಲು ಅರಣ್ಯದಲ್ಲಿ ತಮ್ಮ ಲಾಭಕ್ಕೋಸ್ಕರ ಕೋಳಿಅಂಕ ಜೂಗಾರಾಟ ಆಡುತ್ತಿದ್ದರು. ಹುಂಜಗಳ ಕಾಲುಗಳಿಗೆ ಕತ್ತಿ  ಕಟ್ಟಿ ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಪಂಥ ಕಟ್ಟಿ ಆಡುತ್ತಿದ್ದಾಗ ೨ ಜನ ಆರೋಪಿತರು ಸ್ಥಳದಲ್ಲಿ ಸಿಕ್ಕಿದ್ದು, ಇನ್ನುಳಿದವರು ಓಡಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: Youth died/ ಭಟ್ಕಳದಲ್ಲಿ ರೈಲು ಡಿಕ್ಕಿ ಹೊಡೆದು ಯುವಕ ಸಾವು