ಭಟ್ಕಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಕ್ರೀಡೋತ್ಸವ-2024ರ ನಿಮಿತ್ತ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿ ಇಲ್ಲಿನ ಅಗ್ನಿಶಾಮಕ ಠಾಣೆ ಆವರಣ ನಡೆಯಿತು.

ಇದನ್ನೂ ಓದಿ : ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ

 

ಆಟಗಾರರಿಗೆ ಶುಭಹಾರೈಸಿದ ಬಿಇಒ ವಿ.ಡಿ.ಮೊಗೇರ

ಪಂದ್ಯಾವಳಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸರ್ಕಾರಿ ಇಲಾಖೆಗಳಲ್ಲಿ ಹಲವಾರು ಹುದ್ದೆಗಳು ಖಾಲಿ ಇರುವುದರಿಂದ ಇರುವ ನೌಕರರೇ ಎಲ್ಲ ಕೆಲಸಗಳನ್ನು ನಿಭಾಯಿಸುವ ಪರಿಸ್ಥಿತಿ ಇದೆ. ಒಬ್ಬ ನೌಕರ ನಾಲ್ಕು ಜನರ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾಮಾನ್ಯವಾಗಿ ನೌಕರನು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಈ ಒತ್ತಡ ನಿವಾರಣೆಗಾಗಿ ಪ್ರತಿ ದಿನ ಕನಿಷ್ಟ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಆ ಮೂಲಕ ಸದೃಢ ದೈಹಿಕ ಆರೋಗ್ಯದೊಂದಿಗೆ ಮಾನಸಿಕವಾಗಿ ಬಲಿಷ್ಟರಾಗಲು ಸಹಕಾರಿಯಾಗಿದೆ. ಈ ರೀತಿಯ ಕ್ರೀಡಾಕೂಟ ಆಯೋಜಿಸುವುದರಿಂದ ಸದಾ ತಮ್ಮದೇ ಆದ ಕೆಲಸದ ಒತ್ತಡದಲ್ಲಿರುವ ನೌಕರರ ಮನಸ್ಸಿಗೆ ಉಲ್ಲಾಸ ಸಿಗಲಿದೆ ಎಂದು ಹೇಳಿದರು.

ಈ ವಿಡಿಯೋ ನೋಡಿ : ಕರಿಮಣಿ ಮಾಲೀಕ ನಾನಲ್ಲ…. https://fb.watch/quJwdv7c64/?mibextid=Nif5oz

ರಾಷ್ಟ್ರಮಟ್ಟ ಕಬಡ್ಡಿಯಲ್ಲಿ ಚಿನ್ನದ ಪದಕ್ಕ ಗೆದ್ದ ಅಗ್ನಿಶಾಮಕದಳದ ಸಿಬ್ಬಂದಿ ಪುರುಷೋತ್ತಮ್ ನಾಯ್ಕ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್.ಎಫ್.ಒ. ಶರತ್ ಶೆಟ್ಟಿ ಮಾತನಾಡಿ, ದೈಹಿಕ ಕ್ಷಮತೆ ವೃದ್ಧಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಯುವ ನೌಕರರು  ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ದಿನದಲ್ಲಿ ದೇಹದ ಆರೋಗ್ಯಕ್ಕೆ ಸಹಾಯ ಆಗುತ್ತದೆ. ಕ್ರೀಡಾ ಚಟುವಟಿಕೆಗಳು ಒತ್ತಡ ನಿವಾರಿಸಲು ಒಳ್ಳೆಯ ಪರಿಹಾರ. ನೌಕರರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ನಾನು 20 ವರ್ಷಗಳ ಸೇವೆ ಸಲ್ಲಿಸಿದ್ದೇನೆ. ಇಲ್ಲೀ ತನಕ ಯಾವುದೇ ಸಂಘಟನೆಯಲ್ಲಿ ಬಾಗಿಯಾಗಿಲ್ಲ. ನಾನೊಬ್ಬ ಸರ್ಕಾರಿ ನೌಕರರ ಸಂಘದ ಸದಸ್ಯ ಅನುವುದು ಗೊತ್ತಾಗಿದ್ದು ಭಟ್ಕಳಕ್ಕೆ ಬಂದ ಮೇಲೆ ಎಂದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ, ಇಂದಿನ ದಿನದಲ್ಲಿ ನೌಕರರು ತೀರಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ನೌಕರರಿಗೆ ಮಾನಸಿಕ ನೆಮ್ಮದಿ, ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ನೌಕರರಲ್ಲಿ ಸಂಘಟನೆ, ಒಗ್ಗಟ್ಟು, ಪರಿಚಯ, ಸೌಹಾರ್ದಯುತ ಭಾವನೆ ಬೆಳೆಯುತ್ತದೆ. ನಮ್ಮ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿಯವರ ನೇತೃತ್ವದಲ್ಲಿ ನಮ್ಮ ಸಂಘ ಅತ್ಯಂತ ಬಲಿಷ್ಠವಾಗಿದೆ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ನಮ್ಮ ಸಂಘ ನೌಕರರ ಸ್ನೇಹಿಯಾಗಿ, ನೌಕರರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದರು.


ಈ‌ ಸಂದರ್ಭದಲ್ಲಿ ರಾಷ್ಟ್ರಮಟ್ಟ ಕಬಡ್ಡಿಯಲ್ಲಿ ಚಿನ್ನದ ಪದಕ್ಕ ಗೆದ್ದ ಅಗ್ನಿಶಾಮಕದಳದ ಸಿಬ್ಬಂದಿ ಪುರುಷೋತ್ತಮ್ ನಾಯ್ಕ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.