ಭಟ್ಕಳ: ಎಳ್ಳು ಬೆಲ್ಲದ ಸಿಹಿಯನ್ನು ಮನೆಮನೆಗೆ ತಲುಪಿಸಿ, ಅದನ್ನು ವಿನಿಮಯ ಮಾಡಿಕೊಂಡು ಪುಟಾಣಿ ಹೆಣ್ಣುಮಕ್ಕಳು, ಯುವತಿಯರು ಸಂಕ್ರಾಂತಿ (Sankranti) ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನಲ್ಲಿ ಹೆಣ್ಣು ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ಸಂಕ್ರಾತಿ ಕಾಳು (ಎಳ್ಳು ಬೆಲ್ಲವನ್ನು) ಹಂಚುತ್ತಿರುವ ದೃಶ್ಯ ಎಲ್ಲಡೆ ಕಂಡು ಬಂತು. ಮಹಿಳೆಯರು ಮನೆಗಳಲ್ಲಿ ವಿಶೇಷವಾದ ಖಾದ್ಯವನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಪರಸ್ಪರ ಶುಭ ಹಾರೈಸಿದರು.
ವಿಡಿಯೋ ಸಹಿತ ಇದನ್ನು ಓದಿ: Makkala Santhe/ ಮುಂಡಳ್ಳಿಯಲ್ಲಿ ಮಕ್ಕಳ ಸಂತೆ
ಪಟ್ಟಣದ ವಿ.ವಿ ರೋಡ್, ಸುಭಾಸ ರಸ್ತೆ, ನೆಹರು ರಸ್ತೆ, ಗ್ರಾಮೀಣ ಭಾಗಗಳಾದ ಮುಂಡಳ್ಳಿ, ಮುಟ್ಟಳ್ಳಿ, ತಲಾಂದ, ಮುರ್ಡೇಶ್ವರ ಸೇರಿದಂತೆ ಎಲ್ಲಡೆಯೂ ನೇಸರನು ಪಥ ಬದಲಾವಣೆಯ ಸಂಕ್ರಾಂತಿ (Sankranti) ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಇದನ್ನು ಓದಿ: Outrage/ ಸಚಿವ ಮಂಕಾಳ ವೈದ್ಯ ವಿರುದ್ಧ ಮಾಜಿ ಶಾಸಕ ಸುನೀಲ ನಾಯ್ಕ ಆಕ್ರೋಶ
ಮುರ್ಡೇಶ್ವರದ ಸಮುದ್ರದಲ್ಲಿ ನೂರಾರು ಸಂಖ್ಯೆಯ ಪ್ರವಾಸಿಗರು ಸ್ನಾನ ಮಾಡಿ ಮಾತೋಬಾರ ದೇವರಿಗೆ ಪೂಜೆ ಸಲ್ಲಿಸಿದರು. ತಾಲೂಕಿನ ವಿವಿಧ ದೇವಸ್ಥಾನಗಳಲ್ಲೂ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ಇದನ್ನು ಓದಿ: Bhatkal Food Festival/ ಬೆಂಗಳೂರು ಹೋಟೆಲ್‌ನಲ್ಲಿ ಭಟ್ಕಳ ಆಹಾರ ಉತ್ಸವ



