ಕುಮಟಾ : ಮತದಾನದ ಚೀಟಿಯ ಮೂಲಕ ಮತ ಚಲಾಯಿಸುವ ಪ್ರಕ್ರಿಯೆ ಈ ಹಿಂದೆ ಸಾರ್ವತ್ರಿಕ ಚುನಾವಣೆಯ ಸಂದರ್ಭ ನಡೆಯುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಚುನಾವಣಾ ಆಯೋಗವು ಇವಿಎಂ ಮೂಲಕ ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಹಾಗೂ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆಯ ಇವಿಎಂ ಮಾದರಿಯಲ್ಲಿಯೇ ಚುನಾವಣೆ ನಡೆಸುವ ಹೊಸ ಪ್ರಯತ್ನಕ್ಕೆ ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರ ಮುಂದಾಗಿತ್ತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಸರಸ್ವತಿ ವಿದ್ಯಾ ಕೇಂದ್ರದಲ್ಲಿ ೨೦೨೪-೨೫ನೇ ಸಾಲಿನ ಶಾಲಾ ಸಂಸತ್ತಿನ ಮುಖ್ಯಮಂತ್ರಿ, ಕ್ರೀಡಾ ಮಂತ್ರಿ ಹಾಗೂ ಸಾಂಸ್ಕೃತಿಕ ಮಂತ್ರಿಗಳ ಆಯ್ಕೆ ಪ್ರಕ್ರಿಯೆಗಾಗಿ ಶನಿವಾರ ಚುನಾವಣೆ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು. ಸುಮಾರು ೨೬೬ ವಿದ್ಯಾರ್ಥಿಗಳು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳು ಅತ್ಯುತ್ಸಾಹದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದರ ಅರಿವನ್ನೂ ಪಡೆದರು.

ಇದನ್ನೂ ಓದಿ : ಭಟ್ಕಳ ನ್ಯಾಯಾಲಯದ ಕಟ್ಟಡಕ್ಕೆ ೧೨ ಕೋಟಿ ರೂ. : ಸಚಿವರಿಗೆ ಅಭಿನಂದನೆ

ಡಿಜಿಟಲ್ ಮಾದರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸ್ಪರ್ಧಾಳುಗಳ ಭಾವಚಿತ್ರ ಸಹಿತ ಬೆಲೆಟ್ ಗಳು ಕಾಣುವಂತೆ ಮಾಡಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಗುರುತನ್ನು ಚಲಾಯಿಸಿದರು. ವಿದ್ಯಾರ್ಥಿಗಳ ಎಡಗೈ ತೋರು ಬೆರಳಿಗೆ ಚುನಾವಣಾ ಪ್ರಕ್ರಿಯೆ ನಡೆದ ಬಗ್ಗೆ ಶಾಯಿ ಹಚ್ಚುವುದರ ಮೂಲಕ ಹಾಗೂ ಮತದಾನ ಪ್ರಕ್ರಿಯೆಗೆ ಬಂದ ಸಂದರ್ಭದಲ್ಲಿ ಅವರ ದಾಖಲೆಗಳನ್ನು ಪರಿಶೀಲಿಸಿ, ಗುರುತು ಮಾಡಿಕೊಳ್ಳುವ ಮೂಲಕ ಸಾರ್ವತ್ರಿಕ ಚುನಾವಣಾ ಮಾದರಿಯನ್ನೇ ಪಾಲಿಸಲಾಗಿತ್ತು.

ಇದನ್ನೂ ಓದಿ : ಸಚಿನ್ ಮಹಾಲೆ ಅವರಿಗೆ ಬಿಜೆಪಿಯಿಂದ ಶ್ರದ್ಧಾಂಜಲಿ

ಈ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಗಳಗಳನ್ನು ಗಮನಿಸಲು ಆಗಮಿಸಿದ್ದ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ್ ಶೆಟ್ಟಿ, ಸರಸ್ವತಿ ವಿದ್ಯಾ ಕೇಂದ್ರದ ಶಿಕ್ಷಕವೃಂದದವರು ಹರ್ಷವ್ಯಕ್ತಪಡಿಸಿದರು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಚುನಾವಣಾ ಪ್ರಕ್ರಿಯೆಗಳನ್ನು ನಡೆಯುತ್ತಿರುವುದು ಸಂತಸ ಎನಿಸುತ್ತದೆ. ವಿದ್ಯಾರ್ಥಿಗಳು ಅತ್ಯಂತ ಶಿಸ್ತು ಪಾಲನೆಯ ಮೂಲಕ ಚುನಾವಣಾ ಮತದಾನ ಪ್ರಕ್ರಿಯೆ ಕೈಗೊಂಡಿದ್ದರು. ಚುನಾವಣಾ ಸ್ಪರ್ಧಿಗಳ ಗಮನಿಸಿದಾಗ ಚುನಾವಣೆಯ ಕುರಿತಾಗಿ ಅವರಿಗಿರುವ ಗಂಭೀರತೆ ಅರ್ಥವಾಗಿದೆ. ಇಂತಹ ಪ್ರಕ್ರಿಯೆಗಳು ವಿದ್ಯಾರ್ಥಿಗಳಿಗೆ ನೈಜತೆಯ ಅರಿವು ನೀಡುತ್ತದೆ ಎಂದರು.

ಇದನ್ನೂ ಓದಿ : ಪ್ರಶಂಸನಾ ಪತ್ರ ಪಡೆದ ಭಟ್ಕಳ ಶಹರ ಠಾಣೆಯ ದೀಪಕ ನಾಯ್ಕ

ಉಪನ್ಯಾಸಕ ಚಿದಾನಂದ ಭಂಡಾರಿ ಈ ಸಂದರ್ಭದಲ್ಲಿ ಹಾಜರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ ಸಾರ್ವಜನಿಕ ಚುನಾವಣಾ ಪ್ರಕ್ರಿಯೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಕರಾದ ಸುಮಂಗಲಾ ನಾಯ್ಕ, ಈಶ್ವರ ಗೌಡ, ಪ್ರಜ್ಞಾ ನಾಯ್ಕ, ತನುಜಾ ನಾಯ್ಕ, ಹರ್ಷಿತಾ ಭಂಡಾರಿ, ಶೃತಿ ಪೆಡ್ನೇಕರ್, ಅಶ್ವಿನಿ ನಾಯಕ, ಉಷಾ ಭಟ್ಟ, ಕನ್ಯಾಕುಮಾರಿ ಹೆಗಡೆಕರ್ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಂತೆ ಮಾಡಿದರು. ಗಣೇಶ ಜೋಶಿ ಡಿಜಿಟಲ್ ಮಾದರಿಯಲ್ಲಿ ಯಾವ ರೀತಿಯಲ್ಲಿ ಮತದಾನ ಮಾಡಬೇಕು ಹಾಗೂ ಈ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿವರಿಸಿದರು.

ಇದನ್ನೂ ಓದಿ : ಬೃಹತ್ ಉದ್ಯೋಗ ಸಂದರ್ಶನ ಜೂನ್ ೧೮ರಂದು