ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway) ದಾಟಲು ರಸ್ತೆ ಬದಿ ನಿಂತುಕೊಂಡಿದ್ದ ಮೀನುಗಾರನಿಗೆ (fisherman) ಕಾರು ಡಿಕ್ಕಿ ಹೊಡೆದ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಕಳ (Bhatkal) ತಾಲೂಕಿನ ಬೆಳಕೆಯ ಕಂಚಿಕೇರಿ ನಿವಾಸಿ, ಶಿಕ್ಷಕ ಹನುಮಂತ ಜಟ್ಟಪ್ಪ ನಾಯ್ಕ (೩೫) ಈ ಕುರಿತು ದೂರು ನೀಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಾಲಿ ಭಟ್ಕಳದ ಮುಗ್ದುಂ ಕಾಲೋನಿ ನಿವಾಸಿಯಾಗಿರುವ ಉಡುಪಿ (Udupi) ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಗಂಗೊಳ್ಳಿ ಕೋಟೆಗುಡ್ಡೆ ಮೂಲದ ಮೊಹಮ್ಮದ ರಿಜ್ವಾನ ತಂದೆ ಮೊಹಮ್ಮದ ಹನೀಫ್ ಕಾರು ಚಲಾಯಿಸುತ್ತಿದ್ದರು. ಕಂಚಿಕೇರಿಯ ಮೀನುಗಾರ (fisherman) ದೇವೇಂದ್ರ ಹೊನ್ನಪ್ಪ ನಾಯ್ಕ (೪೩) ಗಾಯಗೊಂಡವರು.
ಇದನ್ನು ಓದಿ: Assaulted/ ದೂರು ಹಿಂಪಡೆಯದಿದ್ದಕ್ಕೆ ನಡೆಯಿತು ಹಲ್ಲೆ
ದೂರಿನಲ್ಲಿ ತಿಳಿಸಿರುವಂತೆ, ದಿನಾಂಕ: ೧೧-೧-೨೦೨೬ರಂದು ರಾತ್ರಿ ೭:೫೦ ಗಂಟೆ ಸುಮಾರಿಗೆ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ಎದುರು ರಾಷ್ಟ್ರೀಯ ಹೆದ್ದಾರಿ ದಾಟಲು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ದೇವೇಂದ್ರ ಅವರಿಗೆ ಕಾರು ಡಿಕ್ಕಿಯಾಗಿತ್ತು. ಆರೋಪಿಯು ಕಾರನ್ನು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು, ದೇವೇಂದ್ರಇವರಿಗೆ ತಲೆಗೆ ರಕ್ತಗಾಯ, ಎರಡು ಕಾಲಿಗೆ ತೆರಚಿದ ಗಾಯವಾಗಿದೆ.
ಇದನ್ನು ಓದಿ: cyber complaint/ ಸೈಬರ್ ದೂರು ಕೊಟ್ಟ ನಂತರವೂ ಖಾತೆಯಿಂದ ಹಣ ಮಾಯ



