ಭಟ್ಕಳ : ದ್ವಿತೀಯ ಪಿಯುಸಿ ೨೦೨೪ನೇ ಸಾಲಿನ ಫಲಿತಾಂಶ ಪ್ರಕಟವಾಗಿದೆ. ಭಟ್ಕಳದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ ೩೮೨ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ ೧೦೦ ಪ್ರತಿಶತ ಫಲಿತಾಂಶ ದಾಖಲಿಸಿ ಸಾಧನೆಗೈದಿದ್ದಾರೆ.
ಇದನ್ನೂ ಓದಿ : ಕಾಲೇಜಿಗೆ ಹೋಗದೇ ದ್ವಿತೀಯ ಪಿಯುಸಿಯಲ್ಲಿ 95.70% ಸಾಧನೆ
ವಿಜ್ಞಾನ ವಿಭಾಗ :
ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ ೩೪೦ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ ೧೦೦ ಫಲಿತಾಂಶ ದಾಖಲಿಸಿದ್ದಾರೆ. ಲೇಖಾ ಕೃಷ್ಣ ಭಂಡಾರಿ ೬೦೦ಕ್ಕೆ ೫೮೭ (೯೭.೮೩%) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್ ಸುದೀಶ ಹಾಗೂ ಶಿವಾನಿ ಸತ್ಯನಾರಾಯಣ ಶೇಟ್ ೬೦೦ ಕ್ಕೆ ೫೮೫ (೯೭.೫೦%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಂಧ್ಯಾ ಜಟ್ಟಪ್ಪ ನಾಯ್ಕ ೬೦೦ ಕ್ಕೆ ೫೮೪ (೯೭.೩೩%) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಗಣಿತ ವಿಷಯದಲ್ಲಿ ೧೬ ವಿದ್ಯಾರ್ಥಿಗಳು, ಗಣಕಯಂತ್ರ ವಿಜ್ಞಾನ ವಿಷಯದಲ್ಲಿ ೧೧, ರಸಾಯನಶಾಸ್ತ್ರದಲ್ಲಿ ೩, ಜೀವಶಾಸ್ತ್ರ ವಿಷಯದಲ್ಲಿ ೮ ವಿದ್ಯಾರ್ಥಿಗಳು ಹಾಗೂ ಕನ್ನಡ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ ೧೦೦ ಕ್ಕೆ ೧೦೦ ಅಂಕ ಪಡೆದು ಸಾಧನೆಗೈದಿದ್ದಾರೆ.
ವಾಣಿಜ್ಯ ವಿಭಾಗ :
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ೪೨ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ ೧೦೦ ಫಲಿತಾಂಶ ದಾಖಲಾಗಿದೆ. ೨೦೮ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ೯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂಕಿತಾ ಓಂಕಾರ್ ಮೊಗೇರ ೬೦೦ ಕ್ಕೆ ೫೭೭ ಅಂಕ (೯೬.೧೬%) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಶ್ರದ್ಧಾ ಪೂಜಾರಿ ೬೦೦ ಕ್ಕೆ ೫೭೧ ಅಂಕ (೯೫.೧೬%) ಪಡೆದು ದ್ವೀತೀಯ ಸ್ಥಾನ ಪಡೆದಿದ್ದಾರೆ. ತೇಜಸ್ ೬೦೦ಕ್ಕೆ ೫೬೨ ಅಂಕ (೯೩.೬೬%) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.