ಭಟ್ಕಳ: ತಾಲೂಕಿನ ರಾಜ್ಯ ಹೆದ್ದಾರಿ–೫೦ರ ಸಾಗರ ರಸ್ತೆಯಲ್ಲಿ ಕಾಡು ಹಂದಿ (wild boar) ಅಡ್ಡ ಬಂದು ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ. ದಿನದ ಬಾಡಿಗೆಯನ್ನೇ ನಂಬಿ ಜೀವನ ಸಾಗಿಸುವ ಆಟೋ ಚಾಲಕನ ಬದುಕಿಗೆ ಈ ಅಪಘಾತ ದೊಡ್ಡ ಹೊಡೆತ ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೋಟಖಂಡ ಮಾರುಕೇರಿ ನಿವಾಸಿ ಹಾಗೂ ತರಕಾರಿ ವ್ಯಾಪಾರಿಯಾಗಿರುವ ಪದ್ಮಾವತಿ ನೀಡಿದ ದೂರಿನ ಪ್ರಕಾರ, ಭಟ್ಕಳ–ಸಾಗರ ರಸ್ತೆಯ ಪುರಸಭೆ ಕಸ ಹಾಕುವ ಸ್ಥಳದ ಬಳಿ ಭಟ್ಕಳದಿಂದ ಮಾರುಕೇರಿ ಕೋಟಖಂಡದ ಕಡೆಗೆ ಸಾಗುತ್ತಿದ್ದ ಆಟೋಗೆ ಏಕಾಏಕಿ ಕಾಡು ಹಂದಿ (wild boar) ಅಡ್ಡ ಬಂದಿದ್ದು, ಚಾಲಕ ತುರ್ತು ಬ್ರೇಕ್ ಹಾಕಿದ ಪರಿಣಾಮ ಆಟೋ ಪಲ್ಟಿಯಾಗಿದೆ.

ಇದನ್ನು ಓದಿ: Award/ ಕರ್ನಾಟಕ ಪ್ರೆಸ್ ಕ್ಲಬ್ ನ “ಕರ್ನಾಟಕ ಸೇವಾರತ್ನ ಪ್ರಶಸ್ತಿ”ಗೆ ಆಯ್ಕೆ

ಅಪಘಾತದಲ್ಲಿ ಆಟೋ ಚಾಲಕ, ಸೋನಾರಕೇರಿ ನಿವಾಸಿ ಶಶಿಕಾಂತ ತಂದೆ ರಾಮಚಂದ್ರ ಶೇಟ ಅವರಿಗೆ ತಲೆಭಾಗ ಹಾಗೂ ಎರಡೂ ಕಾಲುಗಳಲ್ಲಿ ಭಾರೀ ಮುರಿತ ಉಂಟಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಆಟೋದಲ್ಲಿದ್ದ ಪ್ರಯಾಣಿಕೆಯಾಗಿದ್ದ ಪದ್ಮಾವತಿ ಅವರಿಗೆ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನು ಓದಿ: ChennabhairaDevi/ ‘ರಾಣಿ ಚೆನ್ನಭೈರಾದೇವಿಯವರನ್ನು ಮರೆತಿರುವುದು ಖೇದಕರ’

ಕುಟುಂಬದ ಹೊಟ್ಟೆಪಾಡಿಗಾಗಿ ದಿನನಿತ್ಯ ದುಡಿಯುತ್ತಿದ್ದ ಆಟೋ ಚಾಲಕನಿಗೆ ಈ ಅಪಘಾತದಿಂದ ಜೀವನೋಪಾಯಕ್ಕೂ ಸಂಕಷ್ಟ ಎದುರಾಗಿದೆ. ಈ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: Biker injured/ ಟ್ಯಾಂಕರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರಗೆ ಗಾಯ