ಅಂಕೋಲಾ: ಮಾಜಿ ಶಾಸಕ ಉಮೇಶ ಭಟ್ಟ ಅವರ ಅಣ್ಣನ ಮೊಮ್ಮಗ ಹರೆರಾಮ ಭಟ್ಟ ಬಾವಿಕೇರಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
`ಲೋಕಧ್ವನಿ’ ಪತ್ರಿಕೆ ಉಮೇಶ ಭಟ್ಟ ಅವರ ಮಾಲಕತ್ವದಲ್ಲಿದ್ದಾಗ ಅದರ ಉಸ್ತುವಾರಿಯನ್ನು ಹರೆರಾಮ ಭಟ್ಟ ನೋಡಿಕೊಳ್ಳುತ್ತಿದ್ದರು. ಅವರು ಅಂಕೋಲಾದಲ್ಲಿ ವಾಸವಾಗಿದ್ದರು. ಪ್ರಸ್ತುತ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಉದ್ಯೋಗಾವಕಾಶ; ಜು.೨೫ರೊಳಗೆ ಅರ್ಜಿ ಸಲ್ಲಿಸಿ
ಕಳೆದ ೧ ತಿಂಗಳಿನಿoದ ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ಹರೆರಾಮ ಭಟ್ಟ ಅವರು ಅಂಕೋಲಾದಲ್ಲಿ ಚಿಕಿತ್ಸೆ ಪಡೆದಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಸಂಜೆ ಅವರ ಮೆದುಳು ನಿಷ್ಕಿಯಗೊಂಡಿತ್ತು. ಗುರುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಯಲ್ಲಾಪುರ ತಾಲೂಕಿನ ಬಿದ್ರೆಮನೆಯ ಮೈತ್ರಿ ಎಂಬಾತರನ್ನು ಅವರು ವರಿಸಿದ್ದರು. ಅವರಿಗೆ ಪುಟ್ಟ ಮಗುವಿದೆ.