ಸೊರಬ: ಇಲ್ಲಿನ ಪುರಸಭೆ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕಂದಾಯ ನಿರೀಕ್ಷಕ ವಿನಾಯಕ ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದಾರೆ. ಹೊನ್ನಾವರ ಮೂಲದ ಪ್ರತಿಭಾ ಎಂ. ನಾಯ್ಕ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಅತ್ತೆ ಸಾಯಲೆಂದು ಹರಕೆ ಹೊತ್ತ ಸೊಸೆ !
ಏನಿದು ಪ್ರಕರಣ:
ಹೊನ್ನಾವರ ಮೂಲದ ಪ್ರತಿಭಾ ಅವರು ಹಳೇ ಸೊರಬ ವ್ಯಾಪ್ತಿಯ ಕಸಬಾ ಹೋಬಳಿಯಲ್ಲಿ ಖಾಲಿ ನಿವೇಶನ ಹೊಂದಿದ್ದು, ಇದು ಇ-ಸ್ವತ್ತಾಗಿದೆ. ಈ ಜಾಗವು ಗ್ರಾಮಪಂಚಾಯ್ತಿಯಿಂದ ಸೊರಬ ಪುರಸಭೆಗೆ ಸೇರಿದ್ದರಿಂದ ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 575.5366 ಚಮೀ ನಿವೇಶನಕ್ಕೆ ಇ- ಸ್ವತ್ತು ನೀಡಲಾಗಿತ್ತು. ಆದರೆ, ಈ ಹಿಂದೆ ಹಳೇ ಸೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇ- ಸ್ವತ್ತು ಮಾಡಿಸಿದಾಗ ಈ ಜಾಗವು ಒಟ್ಟು 6950 ಚಮೀ ವಿಸ್ತೀರ್ಣ ಇದ್ದುದರಿಂದ ಈ ಜಾಗಕ್ಕೆ ಅನುಗುಣವಾಗಿ ಇ -ಸ್ವತ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.
ಈ ವಿಡಿಯೋ ನೋಡಿ : ಭಟ್ಕಳದಲ್ಲಿ ಇಬ್ಬರು ಆರೋಪಿಗಳ ವಿಚಾರಣೆ https://fb.watch/qE0ZlYCPA-/?mibextid=Nif5oz
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿಕೊಡಲು ಕಂದಾಯ ನಿರೀಕ್ಷಕ ವಿನಾಯಕ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಾ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ವಿನಾಯಕ ಅವರು ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಅವರನ್ನು ಬಂಧಿಸಿದೆ. ಆರೋಪಿಯಿಂದ 40 ಸಾವಿರ ರೂ. ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಲೋಕಾಯುಕ್ತ ಎಸ್.ಪಿ. ಎನ್. ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಎಚ್.ಎಸ್. ಸುರೇಶ್, ಸಿಬ್ಬಂದಿ ಮಹಂತೇಶ್, ಸುರೇಂದ್ರ, ಯೋಗೀಶ್, ಬಿ.ಟಿ. ಚನ್ನೇಶ್, ಪ್ರಶಾಂತ್ ಕುಮಾರ್, ಅರುಣ್ ಕುಮಾರ್, ದೇವರಾಜ, ರಘು ನಾಯ್ಕ, ಜಯಂತ, ಗೋಪಿ, ಪ್ರದೀಪ್ ಕುಮಾರ್, ಬಿ.ಕೆ. ಗಂಗಾಧರ ಅವರುಗಳ ತಂಡ ಕಾರ್ಯಾಚರಣೆ ನಡೆಸಿದೆ.