ಭಟ್ಕಳ: ಟ್ಯಾಟೂ ಅಂಗಡಿಗೆ ನುಗ್ಗಿ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮುರುಡೇಶ್ವರದಲ್ಲಿ (Murudeshwar) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ತೆರ್ನಮಕ್ಕಿ ಮೂಲದ, ಖಾಲಿ ಚೌತನಿಯ ಹೊಂಡದಕೇರಿಯಲ್ಲಿ ವಾಸವಾಗಿರುವ ಶಿಲ್ಪಿ ರಾಜೇಂದ್ರ ತಂದೆ ಸೂರ‍್ಯಕಾಂತ ನಾಯ್ಕ (೨೬) ಹಲ್ಲೆಗೆ ಒಳಗಾದವರು. ಈ ಕುರಿತು ಮುರುಡೇಶ್ವರ (Murudeshwar) ಜನತಾ ಕಾಲೋನಿಯ ಮಂಜು ನಾಗಪ್ಪ ನಾಯ್ಕ, ಕಡ್ಡಿರಾಜು, ಹೃತೀಕ, ಮೋಹನ, ಶಿವರಾಜ, ಗಣೇಶ, ಶೇರುಗಾರ, ಪ್ರಶಾಂತ ಹಾಗೂ ಇನ್ನೂ ಕೆಲವರು ಹಲ್ಲೆ ನಡೆಸಿರವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Accident/ ಮೂವರಿದ್ದ ಬೈಕ್ ಕಾರಿಗೆ ಡಿಕ್ಕಿ: ಇಬ್ಬರಿಗೆ ಗಾಯ; ಕಾರು ಚಾಲಕನ ವಿರುದ್ಧ ಪ್ರಕರಣ
ರಾಜೇಂದ್ರ ನಾಯ್ಕ ಅವರಿಗೆ ಅವರ ಸ್ನೇಹಿತನಾದ ಭರತ ನಾರಾಯಣ ನಾಯ್ಕ ದಿನಾಂಕ: ೧೯-೦೧-೨೦೨೬ ರಂದು ಸಂಜೆ ಪೋನ್ ಮಾಡಿ ಮುರ್ಡೇಶ್ವರದ ಶಿವಂ ಟ್ಯಾಟೋ ಶಾಪಗೆ ಟ್ಯಾಟೋ ಹಾಕಿಸಲು ಹೋಗುತ್ತಿರುವುದಾಗಿ ಬಾ ಅಂತಾ ಕರೆದಿದ್ದರು . ಆದ್ದರಿಂದ ಅವರು ತಮ್ಮ ಮತ್ತೊಬ್ಬ ಸ್ನೇಹಿತನಾದ ರೋಹಿತನನ್ನು ಸಂಗಡ ಕರೆದುಕೊಂಡು ಮುರ್ಡೇಶ್ವರದ ಶಿವಂ ಟ್ಯಾಟೋ ಅಂಗಡಿಗೆ ಬಂದಿದ್ದರು.
ಇದನ್ನು ಓದಿ: woman dies/ ಒಲೆಯ ಬೆಂಕಿ ತಗುಲಿ ಗಂಭೀರಗೊಂಡಿದ್ದ ವೃದ್ಧೆ ಕೊನೆಯುಸಿರು
ಆಗ ಸಂಜೆ ೫: ೩೦ರ ಸುಮಾರಿಗೆ ಮಂಜು ನಾಗಪ್ಪ ನಾಯ್ಕ ಕೆಲವರನ್ನು ಸೇರಿಸಿಕೊಂಡು ಯಾವುದೋ ಹಳೆದ್ವೇಷದಿಂದ ಗುಂಪುಗೂಡಿಕೊಂಡು ಏಕಾಏಕಿ ಟ್ಯಾಟೊ ಅಂಗಡಿಯ ಒಳಗೆ ಬಂದಿದ್ದಾರೆ. ಅವರುಗಳ ಪೈಕಿ ಮಂಜು ನಾಯ್ಕ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕುತ್ತಾ ತನ್ನ ಕೈಯಿಂದ ಅವರ ಬಲ ಮೊಣಕಾಲಿಗೆ ಗುದ್ದಿದ್ದಾನೆ. ಉಳಿದವರು ಸಹ ಕೈಯಿಂದ ಅವರ ಮೈಕೈಗೆ ಹೊಡೆದು ಹಲ್ಲೆ ಮಾಡಿದರು. ನಂತರ ಅಲ್ಲೆ ಇದ್ದವರು ನನಗೆ ತಪ್ಪಿಸಲು ಬಂದಾಗ ಆಪಾದಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ನೀಡಿದ ದೂರಿನ ಅನ್ವಯ ಮುರುಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿಡಿಯೋ ಸಹಿತ ಇದನ್ನು ಓದಿ: Video viral/ ಕಚೇರಿಯಲ್ಲೇ ಡಿಸಿಆರ್ಇ ಡಿಜಿಪಿ ರಾಮಚಂದ್ರ ರಾವ್



