ಭಟ್ಕಳ: ಅಕ್ರಮವಾಗಿ ನೀರು ಮೇವು ಕೊಡದೆ ಹಿಂಸಾತ್ಮಕವಾಗಿ ಒಂಟೆ ಕಟ್ಟಿ ಹಾಕಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ೫ ಒಂಟೆ ರಕ್ಷಣೆ ಮಾಡಿದ್ದಾರೆ. ಈ ಘಟನೆ ಕಾರಗದ್ದೆ ಸಮೀಪ ನಡೆದಿದೆ. ಇಬ್ಬರು ಆರೋಪಿಗಳ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮನೆಯಿಂದ ಮತದಾನ ಮಾಡಿದ ಹಿರಿಯ ನಾಗರಿಕರು

ಆರೋಪಿಗಳನ್ನು ಸಮಾನ್ ಅನ್ಸಾರ ಮೊತಿಯಾ ಹಾಗೂ ಇಮ್ರಾನ್ ಹಶೀಮ್ ಆರಿಯರ್ಸ್ ಎಂದು ತಿಳಿದು ಬಂದಿದೆ. ಇವರು ಕಾರಗದ್ದೆಯಲ್ಲಿ ಇರುವ ಹಾಶಿಮ್ ಅವರ ತೋಟದ ಜಮೀನಿನಲ್ಲಿ ಸುಮಾರು ೧ ಲಕ್ಷ ಬೆಲೆಯ ೫ ಒಂಟೆ ಕಟ್ಟಿಹಾಕಿದ್ದರು. ನೀರು, ಮೇವು ಕೊಡದೆ ಕಟ್ಟಿ ಹಾಕಿ ಹಿಂಸೆ ನೀಡಿದ್ದರಿಂದ ಆರೋಪಿಗಳ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.