ಭಟ್ಕಳ (Bhatkal): ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (AITM)ನಲ್ಲಿ ೪೨ನೇ ಪದವಿ ಪ್ರದಾನ ದಿನ (convocation day) ಮತ್ತು ೪೫ನೇ ವಾರ್ಷಿಕೋತ್ಸವವನ್ನು (annual day) ಜೂನ್ ೨೨ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಉಪಾಧ್ಯಕ್ಷ ಮೊಹಮ್ಮದ್ ಸಾದಿಕ್ ಪಿಲ್ಲೂರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಐಐಟಿ ಮದ್ರಾಸ್ ಪ್ರವರ್ತಕ್ನ ಮಹಾಪ್ರಬಂಧಕ ಡಾ. ಸಿ. ಗೋಪಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ರಾಮಾನುಜನ್ ಇನ್ಸ್ಟಿಟ್ಯೂಟ್ನ ಸಹಸಂಸ್ಥಾಪಕ ಮತ್ತು ಆರ್ಯಭಟ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸಸ್ನ ನಿರ್ದೇಶಕ ಸದಗೋಪನ್ ರಾಜೇಶ್ ಮತ್ತು ನೂಬ್ಟ್ರಾನ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಬಾಲಾಜಿ ರಾಮಚಂದ್ರನ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ಇದನ್ನು ಓದಿ: Janatha Darshan/ ಇಂದು, ನಾಳೆ ಉಸ್ತುವಾರಿ ಸಚಿವರ ಜನತಾದರ್ಶನ
ಮೊಹಮ್ಮದ್ ಅಝಾನ್ ಪೇಶ್ಮಾಮ್ ಪ್ರಾರ್ಥಿಸಿದರು. ರಿಜಿಸ್ಟ್ರಾರ್ ಪ್ರೊ. ಜಾಹಿದ್ ಹಸನ್ ಖರೂರಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಕೆ. ಫಝ್ಲುರ್ ರಹ್ಮಾನ್ ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಅತಿಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಸಲಹೆಗಳು ಹಾಗೂ ಪ್ರೇರಣಾದಾಯಕ ಉಪದೇಶಗಳನ್ನು ನೀಡುವ ಮೂಲಕ ಅವರ ಭವಿಷ್ಯ ವೃತ್ತಿಪರ ಬದುಕಿಗೆ ದಾರಿ ತೋರಿಸಿದರು.
ಇದನ್ನು ಓದಿ: dress code/ ಅರೆಬರೆ ಬಟ್ಟೆ ಧರಿಸಿದರೆ ಪ್ರವೇಶವಿಲ್ಲ !
ಕಾರ್ಯಕ್ರಮದಲ್ಲಿ ಅಂಜುಮನ್ ಹಾಮೀ-ಇ-ಮುಸ್ಲಿಮೀನ್ನ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಇಶಾಕ್ ಶಾಬಂದ್ರಿ, ಎಐಟಿಎಂ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್, ಹೆಚ್ಚುವರಿ ಕಾರ್ಯದರ್ಶಿ ಇಸ್ಮಾಯಿಲ್ ಜುಕಾಕು ಹಾಗೂ ಅಂಜುಮನ್ ನ ಇತರ ಸದಸ್ಯರು ಉಪಸ್ಥಿತರಿದ್ದರು.
ಇದನ್ನು ಓದಿ: Landslide threat/ ಗುಡ್ಡದ ಅಂಚಿನಲ್ಲಿರುವ ಎಂಟು ಕುಟುಂಬಗಳಿಗೆ ನೋಟಿಸ್ ಜಾರಿ
ವಿವಿಧ ಇಂಜಿನಿಯರಿಂಗ್ ವಿಭಾಗಗಳಿಂದ ೨೦೨೫ರಲ್ಲಿ ಪದವಿ ಪಡೆದ ೧೧೨ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ವಿತರಿಸಲಾಯಿತು. ಎಲ್ಲಾ ವಿಭಾಗಗಳಿಂದ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನು ಓದಿ: Table tennis/ ಟೇಬಲ್ ಟೆನ್ನಿಸ್ ಪಂದ್ಯಾವಳಿ ಸಂಪನ್ನ
ಪೋಸ್ಟ್-ಡಾಕ್ಟರಲ್ ಫೆಲೋಶಿಪ್ ಪೂರ್ಣಗೊಳಿಸಿದ ಡಾ. ಕೆ. ಫಝ್ಲುರ್ ರಹ್ಮಾನ್ ಹಾಗೂ ಡಾ. ಜೆ. ಅನ್ವರ್ ಶಾಥಿಕ್ ಮತ್ತು ಪಿಎಚ್ ಡಿ ಪದವಿ ಪಡೆದ ಡಾ. ಕಿರಣ್ ವಿನಾಯಕ ಶಾನಭಾಗ್ ಹಾಗೂ ಡಾ. ಚಿದಾನಂದ ಜಿ. ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ವಿಡಿಯೋ ಸಹಿತ ಇದನ್ನು ಓದಿ: Bike Accident/ ಐ ಆರ್ ಬಿ ಹೊಂಡಕ್ಕೆ ಬಿದ್ದ ಬೈಕ್ ಸವಾರ
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರೊ. ಶ್ರೀಶೈಲ ಭಟ್ಟ ನಡೆಸಿಕೊಟ್ಟರು. ಪ್ರೊ. ಡಾ. ಡೇನಿಯಲ್ ಫ್ರಾನ್ಸಿಸ್ ಸೆಲ್ವರಾಜ್ ವಂದಿಸಿದರು. ವಿದ್ಯಾರ್ಥಿಗಳಾದ ನಾದಿರ್ ಅಹ್ಮದ್, ಝುರೈಫ್ ಅಹ್ಮದ್ ಮತ್ತು ಹಮ್ಜಾ ಖಾನ್ ಕಾರ್ಯಕ್ರಮ ನಿರ್ವಹಿಸಿದರು.
ವಿಡಿಯೋ ಸಹಿತ ಇದನ್ನು ಓದಿ: cochin shipyard/ ಕಡಲ ತೀರದಲ್ಲಿ ಬಾರ್ಜ್ ಪ್ರತ್ಯಕ್ಷ



