ಭಟ್ಕಳ: ಅಂದರ – ಬಾಹರ ಜೂಜಾಟ ಆಡುತ್ತಿದ್ದ ಎಂಟು ಜನರನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು (Bhatkal rural police) ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ (case filed). ಬಂಧಿತರಿಂದ ಒಟ್ಟು ೪.೦೫ ಲಕ್ಷ ರೂಪಾಯಿ ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ (asset seized).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನವರಾದ ಕುಂಟವಾಣಿ ನಿವಾಸಿ ಮಹೇಶ ಕೃಷ್ಣ ಭಂಡಾರಿ (೩೦), ಮಾರುಕೇರಿಯ ಮಂಜುನಾಥ ಸುಕ್ರು ಗೊಂಡ (೩೧), ಕುಂಟವಾಣಿ ಗುಡಿಹಿತ್ತಲು ನಿವಾಸಿ ವಿನಾಯಕ ಮಂಜುನಾಥ ದೇಶಭಂಡಾರಿ (೨೬), ಕುಂಟವಾಣಿ ಅರುಕ್ಕಿಯ ರವಿ ಸಣ್ಣು ಗೊಂಡ (೩೧), ಕುಂಟವಾಣಿ ಗುಡಿಹಿತ್ತಲು ನಿವಾಸಿ ರವಿ ನಾಗೇಶ ಭಂಡಾರಿ (೩೬), ಮಾರುಕೇರಿಯ ವಾಸುದೇವ ತಿಮ್ಮಪ್ಪ ಗೊಂಡ (೨೭), ಕುಂಟವಾಣಿ ಗುಡಿಹಿತ್ತಲು ನಿವಾಸಿ ಮಹೇಶ ಪುಂಡಲೀಕ ಭಂಡಾರಿ (೨೯) ಮತ್ತು ಕೋಣಾರ ಬಿಳೂರಮನೆಯ ಸಂತೋಷ ಕರಿಯ ಗೊಂಡ (೨೫) ಮಾಲು ಸಮೇತ ಸಿಕ್ಕಿಬಿದ್ದ ಆರೋಪಿಗಳು (asset seized).

ಇದನ್ನು ಓದಿ: Foreign fake notes/ ಭಟ್ಕಳದಲ್ಲಿ ವಿದೇಶಿ ನಕಲಿ ನೋಟುಗಳು ಪತ್ತೆ 

ಇವರು ಜುಲೈ 25ರಂದು ರಾತ್ರಿ 10ರ ಸುಮಾರಿಗೆ ಕುಂಟವಾಣಿ ಕ್ರಾಸ್ ಹತ್ತಿರ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು (police raid). ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: Humanity/ ಗಾಯಾಳುಗಳಿಗೆ ನೆರವಾದ ಭಟ್ಕಳ ಉಪವಿಭಾಗಾಧಿಕಾರಿ