ಭಟ್ಕಳ: ತಾಲೂಕಿನ ಬೈಲೂರಿನ ಬಳಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ನೆರವಾಗಿ ಭಟ್ಕಳ (Bhatkal) ಉಪವಿಭಾಗದ ಸಹಾಯಕ ಆಯುಕ್ತೆ (assistant commissioner) ಕಾವ್ಯರಾಣಿ ಮಾನವೀಯತೆ ಮೆರೆದಿದ್ದಾರೆ (humanity).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಂಗಳೂರಿನಿಂದ (Mangaluru) ಗೋಕರ್ಣಕ್ಕೆ (Gokarna) ತೆರಳುತ್ತಿದ್ದ ಯುವಕರ ತಂಡವಿದ್ದ ಕಾರು ಬೈಲೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿತ್ತು. ಈ ಸಂದರ್ಭ ಹೊನ್ನಾವರದತ್ತ (Honnavar) ತೆರಳುತ್ತಿದ್ದ ಎಸಿ ಕಾವ್ಯರಾಣಿ ಘಟನೆ ಕಂಡು ತಕ್ಷಣ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದರು. ತಮ್ಮದೇ ವಾಹನದಲ್ಲಿರುವ ಪ್ರಥಮ ಚಿಕಿತ್ಸೆ ಕಿಟ್ ಬಳಸಿ ಗಾಯಾಳುಗಳನ್ನು ಉಪಚರಿಸಿದರು. ಭಟ್ಕಳ ಟಿಎಚ್‌ಒಗೆ ಸಂಪರ್ಕಿಸಿ ಆಂಬ್ಯುಲೆನ್ಸ್ ಸ್ಥಳಕ್ಕೆ ಕರೆಸಿದರು. ನಂತರ ಸ್ಥಳೀಯರ ಸಹಕಾರದಿಂದ ಗಾಯಗೊಂಡ ಯುವಕರನ್ನು ಸಮೀಪದ ಮಂಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅವರ ಆರೋಗ್ಯ ವಿಚಾರಿಸಿದರು (humanity).

ಇದನ್ನು ಓದಿ: Yasin Bhatkal/ ಮಂಗಳೂರು ನ್ಯಾಯಾಲಯದಲ್ಲಿ ಯಾಸಿನ್ ಭಟ್ಕಳ ವಿಚಾರಣೆ 

ಅಪಘಾತದಲ್ಲಿ ಐದು–ಆರು ಮಂದಿ ಯುವಕರು ಇದ್ದಿದ್ದು, ಒಬ್ಬರಿಗಷ್ಟೇ ಬೆನ್ನು ಭಾಗದಲ್ಲಿ ಸ್ವಲ್ಪ ಗಂಭೀರ ಗಾಯವಾಗಿದ್ದರೆ, ಇತರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ವಿಡಿಯೋ ಸಹಿತ ಇದನ್ನು ಓದಿ: grand procession/ ಅದ್ದೂರಿ ಮೆರವಣಿಗೆ ಮೂಲಕ ಭಟ್ಕಳ ಮಾರಿ ಜಾತ್ರೆ ಸಂಪನ್ನ