ಭಟ್ಕಳ: ವೆಂಕಟಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಜಾತ್ರೆಯ ವೇಳೆ ಮಹಿಳೆಯೊಬ್ಬರ ಮಂಗಲ್ಯ ಸರ ಕಳ್ಳತನವಾದ (theft) ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಬೆಳ್ನೆ ನಿವಾಸಿ ಕುಪ್ಪು ಕೊಂ ನಾಗಪ್ಪ ಮೋಗೇರ (೬೮) ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಹೊರಭಾಗದಲ್ಲಿ ನಿಂತಿದ್ದ ತೇರಿನ ಬಳಿ ಜನಸಂದಣಿಯಲ್ಲಿ ಹೂವಿನ ಪ್ರಸಾದ ಪಡೆಯಲು ಮುಂದಾಗಿದ್ದರು. ಈ ಸಂದರ್ಭ ಜನಸಂದಣಿ ಹಾಗೂ ಗದ್ದಲದ ನಡುವೆ, ಅಪರಿಚಿತರು ಅವರ ಗಮನಕ್ಕೆ ಬಾರದಂತೆ ಕುತ್ತಿಗೆಯಲ್ಲಿದ್ದ ಮಂಗಲ್ಯ ಸರವನ್ನು ಕಳ್ಳತನ (theft) ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: Murudeshwar/ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು 

ಕಳ್ಳತನಗೊಂಡ ಮಂಗಲ್ಯ ಸರವು ಸುಮಾರು ೨೦ ವರ್ಷಗಳ ಹಿಂದೆ ಖರೀದಿಸಿದ್ದಾಗಿದ್ದು, ಅಂದಾಜು ೩೦ ಗ್ರಾಂ ತೂಕ ಮತ್ತು ರೂ ೩೦೦೦೦ ಮೌಲ್ಯ ಹೊಂದಿದೆ ಎಂದು ತಿಳಿದುಬಂದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಎಸ್‌ಐ ಸುನಿಲ್ ಕುಡ್ತಲಕರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ: passes away/ ಗ್ರಾಮ ಸಹಾಯಕ ನಿಧನ