ಭಟ್ಕಳ: ತಾಲೂಕಿನ ಶಿರಾಲಿ ಚಿಪ್ಪಿಕಲ್ಲು ದುರಂತದಲ್ಲಿ (Chippikallu Tragedy) ಮೃತಪಟ್ಟವರ ಕುಟುಂಬಗಳಿಗೆ ಸಾಮಾಜಿಕ ಹೋರಾಟಗಾರ ಹಾಗೂ ಜನಪರ ಮುಖಂಡ ಮಾಸ್ತಪ್ಪ ನಾಯ್ಕ ಬಲಸೆ ₹ ೩ ಲಕ್ಷ ಧನಸಹಾಯ ವಿತರಿಸಿ ಸಾಂತ್ವನ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚಿಪ್ಪಿಕಲ್ಲು ದುರಂತದಲ್ಲಿ (Chippikallu Tragedy) ಮೃತಪಟ್ಟ ೧೦ ಕುಟುಂಬಗಳಿಗೆ ತಲಾ ₹ ೨೫ ಸಾವಿರ ಹಾಗೂ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ₹ ೫೦ ಸಾವಿರ ನೆರವು ನೀಡುವ ಮೂಲಕ ಒಟ್ಟು ₹ ೩ ಲಕ್ಷ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಶಿರಾಲಿಯಲ್ಲಿ ಸಂಭವಿಸಿರುವ ದುರಂತದ ಕುರಿತು ಸಮಗ್ರ ತನಿಖೆ ನಡೆಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.
Leopard/ ಭಟ್ಕಳದಲ್ಲಿ ಬಾವಿಗೆ ಬಿದ್ದ ಚಿರತೆ
ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಮಾನವೀಯತೆ ತೋರಿ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಕುಟುಂಬದ ನಾಲ್ವರು ಮಕ್ಕಳಲ್ಲಿ ಒಬ್ಬಳು ಪಿಯುಸಿ ದ್ವಿತೀಯ ವರ್ಷ ಪೂರ್ಣಗೊಳಿಸಿದ್ದು, ಜೀವನ ನಿರ್ವಹಣೆಗೆ ಉದ್ಯೋಗ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿರುವುದು ಹೃದಯ ವಿದ್ರಾವಕ ಸಂಗತಿ ಎಂದು ಅವರು ಹೇಳಿದರು.
Murinakatte/ ಮುರಿನಕಟ್ಟೆ ಧ್ವಂಸಕ್ಕೆ ಆಕ್ರೋಶ-ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ
ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ವಿಶೇಷ ಗಮನಹರಿಸಿ ಅನಾಥ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಭದ್ರತೆ ಒದಗಿಸಬೇಕು. ತಾಲೂಕಿನ ಬ್ಯಾಂಕುಗಳು, ಸಹಕಾರಿ ಸಂಘಗಳು ಹಾಗೂ ದಾನಿಗಳು ಈ ಕುಟುಂಬದ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿಯೂ ಸಂತ್ರಸ್ತ ಕುಟುಂಬಗಳ ಪರವಾಗಿ ಅಗತ್ಯ ನೆರವು ಹಾಗೂ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಮಾಸ್ತಪ್ಪ ನಾಯ್ಕ ಬಲಸೆ ಭರವಸೆ ನೀಡಿದರು.
Murinakatte/ ಮುರಿನಕಟ್ಟೆ ಹೋರಾಟಕ್ಕೆ ದೈವಬಲ; ಪೂಜೆ ಬಳಿಕ ನಿಂತ ಮಳೆ!



