ಭಟ್ಕಳ: ಮುರಿನಕಟ್ಟೆ (Murinakatte) ಧ್ವಂಸ ಘಟನೆಯನ್ನು ಖಂಡಿಸಿ ಶುಕ್ರವಾರ ನಡೆದ ಭಟ್ಕಳ ಬಂದ್ ಹಾಗೂ ಬೃಹತ್ ಪ್ರತಿಭಟನೆಗೆ ಮುನ್ನ ಹಿಂದೂ ಮುಖಂಡರು ದಂಡಿನ ದುರ್ಗಾ ದೇವಿ ಮತ್ತು ಚನ್ನಪಟ್ಟಣ ಹನುಮಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರಿನಕಟ್ಟೆ (Murinakatte) ಧ್ವಂಸ ಖಂಡಿಸಿ ನಡೆಯುವ ಪ್ರತಿಭಟನಾ ಮೆರವಣಿಗೆ ವೇಳೆ ಮಳೆ ತೊಂದರೆಯಾಗದಂತೆ ಹಾಗೂ ಸಾವಿರಾರು ಕಾರ್ಯಕರ್ತರು ಸುರಕ್ಷಿತವಾಗಿ ಭಾಗವಹಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಕಾಯಿ ಇಟ್ಟು ಪೂಜೆ ನೆರವೇರಿಸಲಾಯಿತು. ಬೆಳಗ್ಗಿನಿಂದಲೇ ಭಟ್ಕಳದಲ್ಲಿ ಮಳೆ ಸುರಿಯುತ್ತಿದ್ದರೂ, ಕಾರ್ಯಕರ್ತರು ಚನ್ನಪಟ್ಟಣ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜಮಾಯಿಸಲು ಆರಂಭಿಸಿದ ವೇಳೆ ಮಳೆ ನಿಂತಿರುವುದು ಗಮನ ಸೆಳೆಯಿತು.

farewell/ ಮೂರು ದಶಕಗಳ ಸೇವೆ ಬಳಿಕ ಹೂವಾ ಗೌಡಗೆ ಭಾವಪೂರ್ಣ ಬೀಳ್ಕೊಡುಗೆ

ಬಳಿಕ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಮುಕ್ತಾಯಗೊಳ್ಳುವವರೆಗೂ ಮಳೆ ಸುರಿಯಲಿಲ್ಲ. ಪ್ರತಿಭಟನೆ ಮುಗಿದು ಜನರು ಸ್ಥಳದಿಂದ ತೆರಳಿದ ಬಳಿಕ ಮತ್ತೆ ಮಳೆ ಆರಂಭಗೊಂಡಿತು. ಹಲವ ಕಾರ್ಯಕರ್ತರು ಮತ್ತು ಭಕ್ತರು ಇದನ್ನು ದೇವರ ಅನುಗ್ರಹವೆಂದು ಬಣ್ಣಿಸಿದರು.

newlywed couple/ ಬೈಕಿನಲ್ಲಿದ್ದ ನವ ದಂಪತಿ ಮೇಲೆ ಬಸ್ ಹತ್ತಿಸಲು ಹೋದ ಚಾಲಕ

ಮುರಿನಕಟ್ಟೆ ಧ್ವಂಸವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ವಯಂಪ್ರೇರಿತ ಬಂದ್‌ಗೆ ಪಟ್ಟಣದ ವ್ಯಾಪಾರಸ್ಥರೂ ಬೆಂಬಲ ಸೂಚಿಸಿದ್ದು, ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಬಂದ್ ಹಾಗೂ ಪ್ರತಿಭಟನೆ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಸಂಘಟಕರು ಸಂತಸ ವ್ಯಕ್ತಪಡಿಸಿದರು.

Tribute/ ಡಾ ಆರ್ ವಿ ಸರಾಫರಿಗೆ ನುಡಿನಮನ-ಶಾಲೆಗೆ ೨.೫೦ ಲಕ್ಷ ರೂ ದೇಣಿಗೆ