ಭಟ್ಕಳ: ತಾಲೂಕಿನ ಮುಂಡಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ನಂ ೨ ಶಾಲೆಗೆ (government school) ಮುಂಡಳ್ಳಿ ನೀರಗದ್ದೆಯ ಕೇಶ್ನಿಮನೆ ದಿವಂಗತ ಲಕ್ಷ್ಮೀ ಹೊನ್ನಪ್ಪ ನಾಯ್ಕ ಸ್ಮರಣಾರ್ಥ ಅವರ ಕುಟುಂಬದವರು ರೂ ೧೦ ಲಕ್ಷ ಮೊತ್ತದ ದೇಣಿಗೆ ನೀಡಿದ್ದಾರೆ (contribution).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈಗಾಗಲೇ ಸುಮಾರು ೪ ಲಕ್ಷ ರೂ ವೆಚ್ಚದಲ್ಲಿ ಸಂಪೂರ್ಣ ಶಾಲೆಗೆ ಅತ್ಯುತ್ತಮ ಗುಣಮಟ್ಟದ ಶೀಟ್ ಅಳವಡಿಸಿಕೊಟ್ಟಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಹೈಟೆಕ್ ಶೌಚಾಲಯ ಹಾಗೂ ನೂತನ ಅಡುಗೆ ಕೋಣೆಯನ್ನು ನಿರ್ಮಿಸಿಕೊಡಲು ಮುಂದಾಗಿದ್ದಾರೆ. ಇವರ ಈ ಅಭೂತಪೂರ್ವ ಕೊಡುಗೆ ಮಾದರಿಯಾಗಿದ್ದು, ಈ ಶಾಲೆಯ (government school) ಎಸ್ ಡಿ ಎಂ ಸಿ (SDMC) ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿ ವೃಂದ, ಪಾಲಕ-ಪೋಷಕ ವೃಂದ ಅತೀವ ಆನಂದ ವ್ಯಕ್ತಪಡಿಸಿ ಕೃತಜ್ಞತೆ ಅರ್ಪಿಸಿದ್ದಾರೆ.



