ಭಟ್ಕಳ: ಚಿಪ್ಪಿಕಲ್ಲು ದುರಂತದಲ್ಲಿ (Chippikallu Tragedy) ತಾಯಿಯ ಸಾವಿನ ನೋವು ಹಾಗೂ ಮದ್ಯದ ಚಟದಿಂದ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ಮನೆಯ ಹಿಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋಳಿನಮನೆ ಗ್ರಾಮದಲ್ಲಿ  ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತರನ್ನು ಆನಂದ ಅಣ್ಣಪ್ಪ ನಾಯ್ಕ (೩೬) ಎಂದು ಗುರುತಿಸಲಾಗಿದೆ. ಎಂ ಕಾಂ (M Com)ಪದವಿ ಪಡೆದಿದ್ದ ಆನಂದ ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದು, ಕಳೆದ ಕೆಲ ವರ್ಷಗಳಿಂದ ಮದ್ಯದ ಚಟಕ್ಕೆ ಬಿದ್ದಿದ್ದರು ಎಂದು ತಿಳಿದುಬಂದಿದೆ.

Farming lessons/ ಗದ್ದೆಯಲ್ಲೇ ಕೃಷಿ ಪಾಠ

ಕುಟುಂಬದವರ ಪ್ರಕಾರ, ಕಳೆದ ಮೇ ತಿಂಗಳಲ್ಲಿ ಶಿರಾಲಿಯ ತಟ್ಟಿಹಕ್ಕಲ್‌ನಲ್ಲಿ ಸಂಭವಿಸಿದ್ದ ಚಿಪ್ಪಿಕಲ್ಲು ದುರಂತದಲ್ಲಿ (chippikallu tragedy) ತಾಯಿ ಲಕ್ಷ್ಮೀ ಮೃತಪಟ್ಟ ಬಳಿಕ ಆನಂದ ತೀವ್ರ ಮನನೊಂದಿದ್ದ. ತಾಯಿಯ ಸಾವಿನ ದುಃಖದಿಂದ ಹೊರಬರಲಾಗದೆ ಮಾನಸಿಕವಾಗಿ ಕುಗ್ಗಿದ್ದ ಆತ ಮದ್ಯಪಾನ ಹೆಚ್ಚಿಸಿಕೊಂಡಿದ್ದ ಎನ್ನಲಾಗಿದೆ. ಆಗಾಗ್ಗೆ ಕುಡಿತಕ್ಕೆ ಹಣ ನೀಡುವಂತೆ ಮನೆಯವರನ್ನು ಒತ್ತಾಯಿಸುತ್ತಿದ್ದು, ಹಣ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

waste disposal/ ಅವೈಜ್ಞಾನಿಕವಾಗಿ ಕಸ ವಿಲೇವಾರಿ: ಕಸ ತಂದ ವಾಹನ ತಡೆದ ಗ್ರಾಮಸ್ಥರು

ಮಂಗಳವಾರವೂ ಆತ ಮನೆಯವರ ಎದುರು ಮಾನಸಿಕ ಅಸ್ವಸ್ಥನಂತೆ ವಿಚಿತ್ರವಾಗಿ ವರ್ತಿಸಿದ್ದ. ಮಧ್ಯಾಹ್ನ ಸುಮಾರು ೨ ಗಂಟೆ ವೇಳೆಗೆ ಮನೆಯ ಮುಂದಿನ ಎರಡೂ ಬಾಗಿಲುಗಳನ್ನು ಒಳಗಿನಿಂದ ಬೀಗ ಹಾಕಿಕೊಂಡು, ಬಳಿಕ ಮನೆಯ ಮೇಲ್ಛಾವಣಿಯ ಹೆಂಚನ್ನು ತೆಗೆದು ಅದರ ಮೂಲಕ ಹೊರಬಂದು ಮನೆಯ ಹಿಂಭಾಗದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Road accident/ ಭಟ್ಕಳದ ಯುವಕನ ಜೀವ ತೆಗೆದ ತ್ರಾಸಿ ಬೀಚ್ ಬಳಿಯ ರಸ್ತೆ ಅಪಘಾತ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಬಾವಿಯಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈ ಸಂಬಂಧ ಮೃತನ ತಂದೆ ಅಣ್ಣಪ್ಪ ಭೈರಾ ನಾಯ್ಕ ನೀಡಿದ ದೂರಿನ ಮೇರೆಗೆ ಮುರುಡೇಶ್ವರ (Murudeshwara) ಪೊಲೀಸ್ ಠಾಣೆಯಲ್ಲಿ (Police station) ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಎಸ್‌ಐ ಹಣಮಂತ ಬಿರಾದಾರ ಕೈಗೊಂಡಿದ್ದಾರೆ.

Commando/ ೧೭ ವರ್ಷ ದೇಶಸೇವೆ ಬಳಿಕ ತವರಿಗೆ ಕಮಾಂಡೋ ವಾಪಸ್: ಯಾರಿವರು ಗೊತ್ತಾ?