ಭಟ್ಕಳ ಡೈರಿ ವರದಿ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRP) ಅಡಿಯಲ್ಲಿ ಉಡುಪಿ (Udupi) ತಾಲೂಕಿನ ಬೆಳ್ಳಂಪಳ್ಳಿ ಕಾರ್ಯಕ್ಷೇತ್ರದ ಕಂಬಳಮಜಲೂ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ತರಬೇತಿ (dairy farming training) ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಿರಿಯ ಪಶು ವೈದ್ಯಾ (Veterinarian) ಡಾ ಮಂಜುನಾಥ ಅಡಿಗ ಮಾತನಾಡಿ, ಲಾಭದಾಯಕ ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳು ಹಸುಗಳ ಆಯ್ಕೆ ಕರುಗಳ ಪಾಲನೆ ವಿವಿಧ ವೈಜ್ಞಾನಿಕ ಆಹಾರ ಪದ್ಧತಿ ಮುಂತಾದ ವಿಚಾರಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

Jasmine Cultivation/ ಮಲ್ಲಿಗೆ ಕೃಷಿ ತರಬೇತಿ ಉದ್ಘಾಟನೆ

ಪ್ರಾಸ್ತಾವಿಕವಾಗಿ ಕೃಷಿ ಮೇಲ್ವಿಚಾರಕ ರಾಮು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRP) ಕಾರ್ಯಕ್ರಮಗಳು ಹಾಗೂ ಜನಪರ ಯೋಜನೆಗಳು, ಕೃಷಿ ಮತ್ತು ಹೈನುಗಾರಿಕೆಯ (dairy farming) ಮಹತ್ವ ಹಾಗೂ ಹೈನುಗಾರಿಕೆ ಮಾಡಲು ಇರಬೇಕಾದ ರೈತರ ಆಸಕ್ತಿ ಬಗ್ಗೆ ಮಾಹಿತಿ ನೀಡಿದರು.

Environmental awareness/ ಪರಿಸರ ಜಾಗೃತಿ ಮಾಹಿತಿ ಶಿಬಿರ, ಗಿಡ ನಾಟಿಗೆ ಚಾಲನೆ 

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ವಿಜಯೇಂದ್ರ ನಾಯ್ಕ, ನೂತನ ಅಧ್ಯಕ್ಷ ಪರಮೇಶ್ವರ ಆಚಾರ್ಯ, ಕೋಶಾಧಿಕಾರಿ ಮುದ್ದು ನಾಯ್ಕ, ಪಶು ಸಹಾಯಕಿ ವಿಜಯಲಕ್ಷ್ಮಿ, ಜನ ಜಾಗೃತಿ ವೇದಿಕೆ ಸದಸ್ಯ ಜಯಾನಂದ ನಾಯ್ಕ, ಸ್ಥಳೀಯ ಸೇವಾ ಪ್ರತಿನಿಧಿ ಸುಧಾಕರ ನಾಯ್ಕ, ಗ್ರಾಮದ ಸುಮಾರು ೪೫ ಜನ ಸ್ವಸಹಾಯ ಸಂಘದ, ಪ್ರಗತಿ ಬಂಧು ಸದಸ್ಯರು ಮತ್ತು ರೈತ ಮಹಿಳೆಯರು ಊರಿನ ಗ್ರಾಮಸ್ಥರು ಮಾಹಿತಿ ಪಡೆದುಕೊಂಡರು.

young woman died/ ಬೈಕಿನಿಂದ ಬಿದ್ದು ಯುವತಿ ದುರ್ಮರಣ