ಭಟ್ಕಳ ಡೈರಿ ವರದಿ
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRP) ಅಡಿಯಲ್ಲಿ ಉಡುಪಿ ತಾಲೂಕಿನ ಬೆಳ್ಳಂಪಳ್ಳಿ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಸ್ವ ಉದ್ಯೋಗ ಕಾರ್ಯಕ್ರಮದಲ್ಲಿ ಮಲ್ಲಿಗೆ ಕೃಷಿ ತರಬೇತಿ (Jasmine Cultivation Training) ನಡೆಯಿತು. ಸೀತಾ ಸುವರ್ಣ ಮತ್ತಿತರರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು (Inauguration).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರಾಸ್ತಾವಿಕವಾಗಿ ಕೃಷಿ ಮೇಲ್ವಿಚಾರಕ ರಾಮು ಮಾತನಾಡಿ, ಸ್ವ ಉದ್ಯೋಗ ಮಾಡುವುದರಿಂದ ಆಗುವ ಅನುಕೂಲ, ಸ್ವ ಉದ್ಯೋಗಕ್ಕಾಗಿ ಯೋಜನೆಯಲ್ಲಿ ಸಿಗುವ ಉಚಿತ ತರಬೇತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRP) ಕಾರ್ಯಕ್ರಮ ಹಾಗೂ ಜನಪರ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
Environmental awareness/ ಪರಿಸರ ಜಾಗೃತಿ ಮಾಹಿತಿ ಶಿಬಿರ, ಗಿಡ ನಾಟಿಗೆ ಚಾಲನೆ
ಸಂಪನ್ಮೂಲ ವ್ಯಕ್ತಿ ಗೀತಾ ಮಾತನಾಡಿ, ಮಲ್ಲಿಗೆ ಕೃಷಿ (Jasmine Cultivation) ನಿರ್ವಹಣೆ ಮಾಡುವ ಕುರಿತು ವಿಧಾನಗಳು, ಮಾರ್ಕೆಟಿಂಗ್ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಗ್ರಾಮದ ಸುಮಾರು ೪೬ ಜನ ಸ್ವಸಹಾಯ ಸಂಘದ ಹಾಗೂ ಪ್ರಗತಿ ಬಂಧು ಸದಸ್ಯರು, ರೈತ ಮಹಿಳೆಯರು, ಊರಿನ ಗ್ರಾಮಸ್ಥರು, ಸ್ಥಳೀಯ ಸೇವಾ ಪ್ರತಿನಿಧಿ ಸುಧಾಕರ ನಾಯ್ಕ ಮಾಹಿತಿ ಪಡೆದುಕೊಂಡರು.
