ಭಟ್ಕಳ ಡೈರಿ ವರದಿ 

ಭಟ್ಕಳ: ಗಣೇಶ ಚತುರ್ಥಿ ಹಬ್ಬದ (Ganesh Chaturthi festival) ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೊಂಕಣ ರೈಲ್ವೆ (Konkan railway) ಮತ್ತು ನೈಋತ್ಯ ರೈಲ್ವೆ (SWR) ಒಟ್ಟು ೨೫೪ ವಿಶೇಷ ರೈಲುಗಳನ್ನು (special trains) ಓಡಿಸಲು ನಿರ್ಧರಿಸಿವೆ. ಇದರಲ್ಲಿ ಭಟ್ಕಳ (Bhatkal), ಮುರ್ಡೇಶ್ವರ (Murdeshwar), ಕುಮಟಾ (Kumta), ಕಾರವಾರ (Karwar) ಸೇರಿದಂತೆ ಕರಾವಳಿ ಪ್ರದೇಶಗಳಿಗೆ (coastal area) ನೇರ ಸಂಪರ್ಕ ಕಲ್ಪಿಸುವ ರೈಲುಗಳೂ ಇವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಬ್ಬಕ್ಕೆ ತವರಿಗೆ ತೆರಳುವವರಿಗೆ ಈ ವಿಶೇಷ ರೈಲುಗಳು (special trains) ದೊಡ್ಡ ಅನುಕೂಲವಾಗಲಿವೆ. ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಿಕೆ ಮತ್ತು ವೇಳಾಪಟ್ಟಿ ಮಾಹಿತಿಗಾಗಿ ರೈಲ್ವೆ ಜಾಲತಾಣ ಅಥವಾ ಸಹಾಯವಾಣಿ ಬಳಸಬಹುದು.

missing/ ಮಂಕಿಯ ತಾಯಿ-ಮಗಳು ಭಟ್ಕಳದಲ್ಲಿ ನಾಪತ್ತೆ

ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ (MLT) ಮಂಗಳೂರು ಜಂಕ್ಷನ್‌ವರೆಗೆ (Mangaluru junction) ವಾರಕ್ಕೊಮ್ಮೆ ಎಸಿ ಸ್ಪೆಷಲ್ ರೈಲು ಸಂಚರಿಸಲಿದೆ. ರೈಲು ಸಂಖ್ಯೆ ೦೧೧೬೫ ಆಗಸ್ಟ್ ೧೬, ೨೩, ೩೦ ಮತ್ತು ಸೆಪ್ಟೆಂಬರ್ ೬ರಂದು ರಾತ್ರಿ ೧೨.೪೫ಕ್ಕೆ ಮುಂಬೈನಿಂದ (Mumbai) ಹೊರಟು ಮರುದಿನ ಸಂಜೆ ೭.೩೦ಕ್ಕೆ ಮಂಗಳೂರು (Mangaluru) ತಲುಪಲಿದೆ. ಹಿಂತಿರುಗುವ ರೈಲು ಸಂಖ್ಯೆ ೦೧೧೬೬ ಮಂಗಳೂರಿನಿಂದ ರಾತ್ರಿ ೧೦.೨೦ಕ್ಕೆ ಹೊರಟು ಮರುದಿನ ಸಂಜೆ ೬.೩೦ಕ್ಕೆ ಮುಂಬೈ ತಲುಪಲಿದೆ. ಈ ರೈಲು ಥಾಣೆ, ಪನ್ವೆಲ್, ರೋಹಾ, ಚಿಪ್ಳೂಣ್, ರತ್ನಗಿರಿ, ಮಡಗಾಂವ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

cabinet/ ಸಚಿವ ಸಂಪುಟದಲ್ಲಿ ಮಂಕಾಳ ವೈದ್ಯಗೆ ಕೋಕ್: ಎನ್‌ ರವಿಕುಮಾರ್ ವ್ಯಂಗ್ಯ

ಬೆಂಗಳೂರು (Bengaluru) – ಮಡಗಾಂವ್ (Margao) ನಡುವೆಯೂ ವಿಶೇಷ ರೈಲು ಇದೆ. ರೈಲು ಸಂಖ್ಯೆ ೦೬೫೬೯ ಆಗಸ್ಟ್ ೨೬ರಂದು ಮಧ್ಯಾಹ್ನ ೧ಕ್ಕೆ ಬೆಂಗಳೂರಿನಿಂದ ಹೊರಟು ಆಗಸ್ಟ್ ೨೭ರ ಬೆಳಿಗ್ಗೆ ೫.೩೦ಕ್ಕೆ ಮಡಗಾಂವ್ ತಲುಪಲಿದೆ. ಈ ರೈಲುಗಳೂ ಉಡುಪಿ, ಕುಂದಾಪುರ, ಭಟ್ಕಳ, ಕಾರವಾರ ಮಾರ್ಗದಲ್ಲಿ ನಿಲುಗಡೆ ಹೊಂದಿವೆ.

Sea Worship/ ಭಟ್ಕಳದಲ್ಲಿ ಮೀನುಗಾರರ ಸಮುದ್ರ ಪೂಜೆ