ಭಟ್ಕಳ ಡೈರಿ ವರದಿ 

ಕುಮಟಾ: ತಾಲೂಕಿನ ಮಣಕಿ ಮೈದಾನದಲ್ಲಿ ನಡೆದ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕು ಸತತ ನಾಲ್ಕನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದಿ ನ್ಯೂ ಇಂಗ್ಲೀಷ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಭಟ್ಕಳದ ಕ್ರೀಡಾ ಸಾಮರ್ಥ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಸಾಧನೆ:

ಕಾಲೇಜಿನ ಜಯಂತ ಮರಾಠಿ ೮೦೦ ಮೀ. ಹಾಗೂ ೧೫೦೦ ಮೀ ಓಟದಲ್ಲಿ ಪ್ರಥಮ, ೪೦೦ ಮೀ. ಹರ್ಡಲ್ಸ್‌ನಲ್ಲಿ ದ್ವಿತೀಯ, ೪×೪೦೦ ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗುಡ್ಡಗಾಡು ಓಟದಲ್ಲೂ ವಿಜೇತರಾಗಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಕ್ಷಯ ಎನ್. ಕೆಲ್ಸಿ  ೪೦೦ ಮೀ. ಓಟ, ೪×೧೦೦ ಮೀ. ರೀಲೆ, ೪×೪೦೦ ಮೀ. ರೀಲೆ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ೨೦೦ ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಶಿವರಾಜ ಮೊಗೇರ ೧೧೦ ಮೀ. ಹರ್ಡಲ್ಸ್, ೪×೧೦೦ ಮೀ. ರೀಲೆ ಹಾಗೂ ೪೦೦ ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಜಯ ನಾಯ್ಕ, ಸುಮಿತ್ ವಿ. ಮೊಗೇರ ಹಾಗೂ ಉದಯ ನಾಯ್ಕ ಕ್ರಮವಾಗಿ ೪×೪೦೦ ಮೀ. ಮತ್ತು ೪×೧೦೦ ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಫಯಿಮ್ ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ನವೀನ ದೇವಾಡಿಗ ನಡಿಗೆಯಲ್ಲಿ ತೃತೀಯ ಹಾಗೂ ನಿಶಾಂತ ಮೊಗೇರ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲೂ ಮಿಂಚಿದ ಸಾಧನೆ:

ಬಾಲಕಿಯರ ವಿಭಾಗದಲ್ಲಿ ಮೇಘನಾ ಎಂ. ನಾಯ್ಕ ೮೦೦ ಮೀ. ಹಾಗೂ ೩೦೦೦ ಮೀ. ಓಟದಲ್ಲಿ ದ್ವಿತೀಯ, ೪×೪೦೦ ಮೀ. ರೀಲೆಯಲ್ಲಿ ಪ್ರಥಮ ಹಾಗೂ ೧೫೦೦ ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಗುಡ್ಡಗಾಡು ಓಟದಲ್ಲೂ ವಿಜೇತರಾಗಿದ್ದಾರೆ. ಧನ್ಯಾ ಗೊಂಡ ೨೦೦ ಮೀ. ಓಟದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸೌಜನ್ಯ ಡಿ. ಹರಿಕಾಂತ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಹಾಗೂ ೧೦೦ ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಿಂದುಶ್ರೀ ಕೆ. ದೇವಾಡಿಗ ೪೦೦ ಮೀ. ಓಟದಲ್ಲಿ ದ್ವಿತೀಯ ಹಾಗೂ ೪×೪೦೦ ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅನೂಷಾ ವಿ. ದೇವಾಡಿಗ ೪×೪೦೦ ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಿತಾಶ್ರೀ ಕೆ. ಗೊಂಡ ೮೦೦ ಮೀ. ಓಟದಲ್ಲಿ ತೃತೀಯ, ೪೦೦ ಮೀ. ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಗುಡ್ಡಗಾಡು ಓಟದಲ್ಲೂ ವಿಜೇತರಾಗಿದ್ದಾರೆ. ಯಶ್ಮಿತಾ ಎಂ. ದೇವಾಡಿಗ ೪×೪೦೦ ಮೀ. ರೀಲೆಯಲ್ಲಿ ಪ್ರಥಮ ಹಾಗೂ ಯಶಸ್ವಿನಿ ನಾಯ್ಕ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಗುಂಪು ಆಟಗಳಲ್ಲೂ ಯಶಸ್ಸು:

ಬಾಲಕರ ಗುಂಪು ಆಟವಾದ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಭಟ್ಕಳ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕಿಯರ ಗುಂಪು ಆಟಗಳಲ್ಲಿ ಭಟ್ಕಳ ತಂಡ ಖೋ-ಖೋದಲ್ಲಿ ದ್ವಿತೀಯ ಹಾಗೂ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಕರಾಟೆಯಲ್ಲಿ ಸಾಧನೆ: ಬಾಲಕರ ವಿಭಾಗದ ಕರಾಟೆಯಲ್ಲಿ ಸಚಿನ್ ಎಂ. ನಾಯ್ಕ ದ್ವಿತೀಯ ಸ್ಥಾನ ಪಡೆದರೆ, ರತನ ಎಲ್. ಪಾವಸ್ಕರ ಹಾಗೂ ವಿಜೇತ ವಿ. ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಬಾಣೇಶ್ವರಿ ಎಂ. ನಾಯ್ಕ ಹಾಗೂ ಯಶಸ್ವಿನಿ ಪಿ. ನಾಯ್ಕ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.

೩೪ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ:

ದಿ ನ್ಯೂ ಇಂಗ್ಲೀಷ್ ಕಾಲೇಜಿನ ಒಟ್ಟು ೩೪ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುವುದು ಕಾಲೇಜಿನ ಕ್ರೀಡಾ ಸಾಧನೆಯ ಮತ್ತೊಂದು ಹೆಗ್ಗಳಿಕೆಯಾಗಿದೆ.

ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ ನಾಯ್ಕ, ಟ್ರಸ್ಟಿ ಅನಿಲ ನಾಯ್ಕ, ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ:

ಮುಟ್ಟಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ: ೮೦ ಮಂದಿ ಸ್ವಯಂಪ್ರೇರಿತ ರಕ್ತದಾನ

ಸಂಪಾದಕೀಯ/ ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ: ಮುಂದಿನ ಹೆಜ್ಜೆ ಯಾವುದು?