ಭಟ್ಕಳ: ಸ್ವಾತಂತ್ರ್ಯೋತ್ತರ ಪೀಳಿಗೆಗೆ ಅಖಂಡ ಭಾರತದ (Akhand Bharat) ಕಲ್ಪನೆ, ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರ ತ್ಯಾಗವನ್ನು ಪರಿಚಯಿಸುವ ಅಗತ್ಯವಿದೆ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಭಾರತ ಕ್ಷೇತ್ರೀಯ ಸಂಚಾಲಕ ಜಗದೀಶ ಕಾರಂತ (Jagdish Karant) ಹೇಳಿದರು. ೮೦ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಟ್ಕಳದ ವಿಶ್ವ ಹಿಂದೂ ಪರಿಷತ್ ಹಾಗೂ ಪರಿವಾರ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ನಿಚ್ಚಲಮಕ್ಕಿ ಸಭಾಭವನದಲ್ಲಿ ಆಯೋಜಿಸಿದ್ದ ಅಖಂಡ ಭಾರತ (Akhand Bharat) ಸಂಕಲ್ಪ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Murudeshwar/ ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿದ ಆರು ಜನರ ಬಂಧನ
ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಬಳಿಕ ದೇವಸ್ಥಾನದಿಂದ ಆರಂಭವಾದ ಪಂಜಿನ ಮೆರವಣಿಗೆ ಮಾರಿಕಟ್ಟೆ, ಹನುಮಾನ್ ದೇವಸ್ಥಾನ, ಹೂವಿನ ಮಾರುಕಟ್ಟೆ ಹಾಗೂ ಸರ್ಕಲ್ ಮೂಲಕ ಸಾಗಿತು.
Independence Day/ ಭಟ್ಕಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಹಿಂದೂ ಜಾಗರಣಾ ವೇದಿಕೆ ಭಟ್ಕಳ ಘಟಕದ ಸಂಚಾಲಕ ಜಯಂತ ನಾಯ್ಕ, ಮಾಜಿ ಸಚಿವ (former minister) ಶಿವಾನಂದ ನಾಯ್ಕ (Shivanand Naik), ಮುಖಂಡರಾದ ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಶ್ರೀಕಾಂತ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹಿಂದೂ ಕಾರ್ಯಕರ್ತ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಪಾಂಡುರಂಗ ಗೊಂಡ ವಂದಿಸಿದರು. ಪತ್ರಕರ್ತ ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
VB–G RAM–G/ ಗ್ರಾಮೀಣ ಜನರ ಸಬಲೀಕರಣವೇ ವಿಕಸಿತ ಭಾರತದ ನಿಜವಾದ ಅಡಿಪಾಯ: ರಾಜೇಶ ಮಹಾಲೆ


