ಭಟ್ಕಳ ಡೈರಿ ವರದಿ
ಭಟ್ಕಳ: ಇಲ್ಲಿನ ಭಟ್ಕಳ ಶಹರ (Bhatkal town) ಪೊಲೀಸ್ ಠಾಣೆ (police station)ವ್ಯಾಪ್ತಿಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ಸಂಭವಿಸಿದ್ದ ಅಪಘಾತದಲ್ಲಿ (Scooter accident) ಗಂಭೀರವಾಗಿ ಗಾಯಗೊಂಡಿದ್ದ ೪೯ ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಭಟ್ಕಳ (Bhatkal) ತಾಲೂಕಿನ ಕಾಯ್ಕಿಣಿ ಗ್ರಾಮದ ಮಠದಹಿತ್ತಲು ಮೊಳಿಮನೆ ನಿವಾಸಿ ಶ್ರೀಧರ ಲಕ್ಷ್ಮಣ ನಾಯ್ಕ (೪೯) ಎಂದು ಗುರುತಿಸಲಾಗಿದೆ.
cricket tournament/ ಎನ್‌ಎಸ್‌ಸಿ ಚಾಂಪಿಯನ್; ಡಿಡಿಸಿ ದ್ವಿತೀಯ
ಜೂನ್ ೨೧ರಂದು ರಾತ್ರಿ ಸುಮಾರು ೧೦ ಗಂಟೆಗೆ ಶ್ರೀಧರ ನಾಯ್ಕ ಅವರು ಸುಜುಕಿ ಸ್ಕೂಟರ್‌ನಲ್ಲಿ ಬೆಳ್ಕೆ ಕಡೆಯಿಂದ ಭಟ್ಕಳದತ್ತ ಬರುತ್ತಿದ್ದರು. ಮಣಕುಳಿ ಸಮೀಪದ ಮಾರುತಿ ಸುಜುಕಿ ಕಾರ್ ಶೋರೂಮ್ ಬಳಿ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದು, ಅಪಘಾತದಲ್ಲಿ (Scooter accident) ಅವರ ತಲೆ ಹಾಗೂ ಗದ್ದಕ್ಕೆ ಗಂಭೀರ ಗಾಯಗಳಾಗಿದ್ದವು. ತೀವ್ರವಾಗಿ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ (Udupi) ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜುಲೈ ೨೯ರಂದು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ ೨೪ರಂದು ರಾತ್ರಿ ಸುಮಾರು ೭.೩೫ಕ್ಕೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ (government hospital) ಶ್ರೀಧರ ನಾಯ್ಕ ಮೃತಪಟ್ಟಿದ್ದಾರೆ.
farmer dies/ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ: ೬೨ ವರ್ಷದ ಕೃಷಿಕ ಸಾವು
ಈ ಕುರಿತು ಕಾಯ್ಕಿಣಿ ಗ್ರಾಮದ ಮಠದಹಿತ್ತಲು ದರ್ಶನ ಮಂಜುನಾಥ ನಾಯ್ಕ (೨೯) ಎಂಬವರು ಆಗಸ್ಟ್ ೨೫ರಂದು ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ (complaint registered). ಅಪಘಾತದ ಸಂದರ್ಭ ಸ್ಕೂಟರ್ ಅನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದೇ ಘಟನೆಗೆ ಕಾರಣವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
farmer dies/ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ: ೬೨ ವರ್ಷದ ಕೃಷಿಕ ಸಾವು

