ಭಟ್ಕಳ ಡೈರಿ ವರದಿ
ಭಟ್ಕಳ: ಸರ್ಕಾರಿ ನೌಕರರಿಗಾಗಿ, (government workers) ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಸರ್ಕಾರಿ ನೌಕರರ ಮಾನ್ಸೂನ್ ಟ್ರೋಫಿ’ (Monsoon trophy) ಕ್ರಿಕೆಟ್ ಪಂದ್ಯಾವಳಿ (cricket tournament) ಭಟ್ಕಳ (Bhatkal) ತಾಲೂಕಿನ ಹೊನ್ನೆಗದ್ದೆ ಶಾಲಾ ಮೈದಾನದಲ್ಲಿ ನಡೆಯಿತು.
farmer dies/ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ: ೬೨ ವರ್ಷದ ಕೃಷಿಕ ಸಾವು
ಕ್ರಿಕೆಟ್ ಪಂದ್ಯಾವಳಿಯಲ್ಲಿ (cricket tournament) ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ (final match) ನಾರಾಯಣ ನಾಯ್ಕ ಕಾರವಾರ (Karwar) ಮಾಲೀಕತ್ವದ ನಾರಾಯಣ ಸ್ಪೋರ್ಟ್ಸ್ ಕ್ಲಬ್ (NSC) ಹಾಗೂ ಧನಂಜಯ ಮೊಗೇರ ಭಟ್ಕಳ ಮಾಲೀಕತ್ವದ ದುರ್ಗಾದೇವಿ ಕ್ರಿಕೆಟರ್ಸ್ (DDC) ತಂಡಗಳು ಮುಖಾಮುಖಿಯಾದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎನ್ಎಸ್ಸಿ ತಂಡ ನಿಗದಿತ ೮ ಓವರ್ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೭೭ ರನ್ ಗಳಿಸಿತು. ಗೆಲುವಿಗೆ ೭೮ ರನ್ಗಳ ಗುರಿ ಬೆನ್ನತ್ತಿದ ಡಿಡಿಸಿ ತಂಡವು ಎನ್ಎಸ್ಸಿ ಬೌಲರ್ಗಳ ದಾಳಿಗೆ ತತ್ತರಿಸಿ ಕೇವಲ ೫೬ ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
Honnavar BJP/ ಕಾರವಾರದಲ್ಲಿ ಸರಣಿ ಹೋರಾಟಕ್ಕೆ ಹೊನ್ನಾವರ ಬಿಜೆಪಿ ಬೆಂಬಲ
ಎನ್ಎಸ್ಸಿ ತಂಡದ ನಾಯಕ ವಿನಾಯಕ ಭಟ್ಟ ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ (Man of the match) ಪ್ರಶಸ್ತಿಗೆ ಭಾಜನರಾದರು. ಡಿಡಿಸಿ ತಂಡದ ವಾಸು ಮೊಗೇರ ಉತ್ತಮ ಬ್ಯಾಟ್ಸ್ಮನ್ (Best Batsman) ಹಾಗೂ ಉತ್ತಮ ಬೌಲರ್ (Best Bowler) ಪ್ರಶಸ್ತಿಗಳನ್ನು ಪಡೆದುಕೊಂಡರು. ಸರ್ಕಾರಿ ನೌಕರರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಹಾಗೂ ಪರಸ್ಪರ ಸ್ನೇಹ-ಸೌಹಾರ್ದತೆ ವೃದ್ಧಿಸುವ ಉದ್ದೇಶದಿಂದ ಆಯೋಜಿಸಲಾದ ಈ ನೂತನ ಕ್ರಿಕೆಟ್ ಪಂದ್ಯಾವಳಿ ಗಮನ ಸೆಳೆಯಿತು.
passes away/ ಸಮಾಜ ಸೇವಕ, ಶಿಕ್ಷಣ ಪ್ರೇಮಿ ರವಿ ಖಾರ್ವಿ ನಿಧನ: ಬಾಲ್ಯ ಸ್ನೇಹಿತರ ಕಂಬನಿ

