ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway)-೬೬ರಲ್ಲಿ ಬೈಕ್ ಸವಾರನೊಬ್ಬ (bike rider) ದುಡುಕಿನಿಂದ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ (Female pedestrian) ಡಿಕ್ಕಿ ಹೊಡೆದ ಘಟನೆ (Bike collision) ಬೇಂಗ್ರೆ ಸಮೀಪ ನಡೆದಿದೆ. ಬೇಂಗ್ರೆಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಕ್ರಾಸ್ ಬಳಿ ಆಗಸ್ಟ್‌ ೨೫ರಂದು ಮಧ್ಯಾಹ್ನ ಸುಮಾರು ೩ ಗಂಟೆಗೆ ಈ ಅಪಘಾತ ಸಂಭವಿಸಿದೆ.

Milad procession/ ಭಟ್ಕಳದಲ್ಲಿ ಅದ್ದೂರಿ ಮಿಲಾದ್ ಮೆರವಣಿಗೆ

ಭಟ್ಕಳದಿಂದ (Bhatkal) ಮುರ್ಡೇಶ್ವರದತ್ತ (Murudeshwar) ತೆರಳುತ್ತಿದ್ದ ಕೆಎ-೪೭-ಇಎ-೮೪೪೯ ಸಂಖ್ಯೆಯ ಮೋಟಾರ್ ಸೈಕಲ್‌ನ್ನು ರಾಘವೇಂದ್ರ ತಂದೆ ಗಣಪತಿ ದೇವಡಿಗ ಎಂಬಾತ ಚಲಾಯಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾಲೇಕೊಡ್ಲು ನಿವಾಸಿ ದೇವಿ ಮಾಸ್ತಿ ಗೊಂಡ (೪೬) ಅವರಿಗೆ ಬೈಕ್ ಡಿಕ್ಕಿ ಹೊಡೆದಿದೆ (Bike collision). ಪರಿಣಾಮ ಅವರ ಎಡ ಕಾಲು, ತಲೆ ಹಾಗೂ ಎದೆ ಭಾಗಕ್ಕೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Bhatkal/ ಅತಿವೇಗದ ಕಾರು ಚಾಲನೆ: ಬೈಕ್ ಸವಾರನಿಗೆ ಗಂಭೀರ ಗಾಯ

ಘಟನೆಗೆ ಸಂಬಂಧಿಸಿದಂತೆ ಗಾಯಾಳುವಿನ ಪುತ್ರ ನಾಗರಾಜ ಮಾಸ್ತಿ ಗೊಂಡ (೨೧) ಆಗಸ್ಟ್‌ ೨೬ರಂದು ಮುರ್ಡೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಈ ಕುರಿತು ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

village assistants/ ನಾಲ್ಕೈದು ದಿನಗಳಲ್ಲಿ ಸಿಎಂ ಜತೆ ಗ್ರಾಮ ಸಹಾಯಕರ ಸಂಘದ ಪ್ರತಿನಿಧಿಗಳ ಸಭೆ: ಜಿ ಪರಮೇಶ್ವರ