ಭಟ್ಕಳ ಡೈರಿ ವರದಿ
ಭಟ್ಕಳ: ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಕಾರೊಂದು (Speeding car) ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ (Biker sustains serious injuries) ಘಟನೆ ಭಟ್ಕಳ (Bhatkal)–ಕುಂದಾಪುರ (Kundapura) ರಾಷ್ಟ್ರೀಯ ಹೆದ್ದಾರಿ (National Highway)–೬೬ರಲ್ಲಿ ಮುಟ್ಟಳ್ಳಿ ಬೈಪಾಸ್ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಯಲ್ವಡಿಕವೂರ ನಿವಾಸಿ ಲೊಕೇಶ ಮಂಜುನಾಥ ನಾಯ್ಕ (೨೦) ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
village assistants/ ನಾಲ್ಕೈದು ದಿನಗಳಲ್ಲಿ ಸಿಎಂ ಜತೆ ಗ್ರಾಮ ಸಹಾಯಕರ ಸಂಘದ ಪ್ರತಿನಿಧಿಗಳ ಸಭೆ: ಜಿ ಪರಮೇಶ್ವರ
ಪೊಲೀಸ್ ದೂರಿನ ಪ್ರಕಾರ, ಉಡುಪಿ (Udupi) ಜಿಲ್ಲೆಯ ಮಣಿಪುರ, ಕುಂತಾಲಾ ನಗರದ ನಿವಾಸಿ ಹಾಗೂ ಕಾರು ಚಾಲಕ ಸುಶಾಂತಕುಮಾರ ತಂದೆ ಕೆ ವಿಷ್ಣುಮೂರ್ತಿ ಆಚಾರ್ಯ ಅವರು ಆಗಸ್ಟ್ ೨೫ರಂದು ಬೆಳಗ್ಗೆ ಸುಮಾರು ೮:೧೫ಕ್ಕೆ ಕುಂದಾಪುರ ಕಡೆಯಿಂದ ಭಟ್ಕಳದತ್ತ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಮುಟ್ಟಳ್ಳಿ ಬೈಪಾಸ್ ಬಳಿ ಭಟ್ಕಳ (Bhatkal) ಕಡೆಯಿಂದ ಸರ್ಪನಕಟ್ಟಾ ಕಡೆಗೆ ಬಜಾಜ್ ಪಲ್ಸರ್ ಮೋಟಾರ್ ಸೈಕಲ್‌ನಲ್ಲಿ (motorcycle) ತೆರಳುತ್ತಿದ್ದ ಲೊಕೇಶ ಅವರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
Scooter accident/ ಭಟ್ಕಳದಲ್ಲಿ ಸ್ಕೂಟರ್ ಅಪಘಾತ: ಗಾಯಗೊಂಡಿದ್ದ ಸವಾರ ಸಾವು
ಅಪಘಾತದ ಪರಿಣಾಮ ಲೊಕೇಶ ಅವರ ತಲೆ, ಹಣೆಯ ಭಾಗ, ಕೈ, ಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದು, ಕಾರು ಮತ್ತು ಮೋಟಾರ್ ಸೈಕಲ್ ಎರಡೂ ಜಖಂಗೊಂಡಿವೆ. ಈ ಕುರಿತು ಲೊಕೇಶ ಅವರ ಪರವಾಗಿ ಸರ್ಪನಕಟ್ಟೆ ನಿವಾಸಿ ಗಣೇಶ ವೆಂಕಟಯ್ಯ ನಾಯ್ಕ (೩೩) ಭಟ್ಕಳ ಶಹರ (Bhatkal town) ಪೊಲೀಸ್ ಠಾಣೆಗೆ (police station) ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (complaint registered) ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

