ಭಟ್ಕಳ: ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಚಿತ್ರಾಪುರ ಮಠದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಶುಕ್ರವಾರ ‘ಸಹೋದರತೆಯ ಭಾವ ಸಂಜೀವಿನಿ’ಯಾಗಿ ರಕ್ಷಾ ಬಂಧನ (Raksha Bandhan) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಸುಮಾರು ಹದಿನಾಲ್ಕು ವರ್ಷಗಳಿಂದ ಶ್ರೀವಲ್ಲಿ ಸಾಹಿತ್ಯ ಸಂಘದ ವತಿಯಿಂದ ಪ್ರತಿವರ್ಷವೂ ರಕ್ಷಾ ಬಂಧನವನ್ನು (Raksha Bandhan) ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

Felicitation/ ಭಟ್ಕಳ ತಾಲೂಕು ಕಸಾಪದಿಂದ ನಿವೃತ್ತ ಮುಖ್ಯಾಧ್ಯಾಪಕ ಗಣಪತಿ ಶಿರೂರು ಸನ್ಮಾನ

ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಆರತಿ ಬೆಳಗಿ, ತಿಲಕವಿಟ್ಟು ರಕ್ಷೆ ಕಟ್ಟಿದರು. ವಿದ್ಯಾರ್ಥಿ–ವಿದ್ಯಾರ್ಥಿನಿಯರು ಪರಸ್ಪರ ಎದುರುಬದುರಾಗಿ ಕುಳಿತು ರಕ್ಷೆ ಕಟ್ಟಿಕೊಳ್ಳುವ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಶಿಕ್ಷಕರು ಹಾಗೂ ಶಿಕ್ಷಕಿಯರೂ ಪರಸ್ಪರ ರಕ್ಷೆ ಧರಿಸಿಕೊಂಡರು.

memorandum/ ಭಟ್ಕಳ ರಿಕ್ಷಾ ಚಾಲಕರ ಸಂಘದಿಂದ ಸಹಾಯಕ ಆಯುಕ್ತರಿಗೆ ಮನವಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಮಮತಾ ಭಟ್ಕಳ ಅವರು ರಕ್ಷಾ ಬಂಧನದ ಮಹತ್ವ ಹಾಗೂ ಉದ್ದೇಶವನ್ನು ವಿವರಿಸಿದರು. ಹಿರಿಯ ಶಿಕ್ಷಕ ಸಂಜಯ ಗುಡಿಗಾರ ಮಾತನಾಡಿ, “ರಕ್ಷಾ ಬಂಧನವು ಸಹೋದರತೆಯ ಬಾಂಧವ್ಯವನ್ನು ಗಟ್ಟಿಗೊಳಿಸುವ ಶ್ರೇಷ್ಠ ಪರಂಪರೆ. ಇಂತಹ ಮೌಲ್ಯಯುತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆಗಾರಿಕೆ” ಎಂದು ಹೇಳಿದರು.

‘Drugs Beda Bro’/ ಮಾದಕ ವ್ಯಸನದ ವಿರುದ್ಧ ಬಿಜೆಪಿ ಯುವಮೋರ್ಚಾದಿಂದ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನ

ಶ್ರೀವಲ್ಲಿ ಸಾಹಿತ್ಯ ಸಂಘದ ಸಂಸ್ಥಾಪಕಿ ಶಿಕ್ಷಕಿ ರೇಷ್ಮಾ ನಾಯಕ, ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಉದಾಹರಣೆಗಳೊಂದಿಗೆ ರಕ್ಷಾ ಬಂಧನದ ಆರಂಭ, ಮಹತ್ವ ಹಾಗೂ ಅದರ ಸಾಂಸ್ಕೃತಿಕ ಆಶಯವನ್ನು ವಿವರಿಸಿದರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಕವಿತಾ ಸ್ವಾಗತಿಸಿದರು. ವಿದ್ಯಾರ್ಥಿಗಳ ಪರವಾಗಿ ನಾಗರಾಜ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಹರ್ಷಿಣಿ ಎಸ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ಗೊಂಡ ವಂದಿಸಿದರು.

Bike collision/ ಮುರ್ಡೇಶ್ವರದಲ್ಲಿ ಬೈಕ್ ಡಿಕ್ಕಿ: ಪಾದಚಾರಿ ಮಹಿಳೆಗೆ ಗಾಯ

ವೇದಿಕೆಯಲ್ಲಿ ನಾರಾಯಣ ನಾಯ್ಕ, ಕಾಂಚನಾ ಮೇಸ್ತ, ತ್ರಿವೇಣಿ ನಾಯ್ಕ, ಶ್ರೀಧರ ನಾಯ್ಕ, ಅಭಿಷೇಕ ನಾಯ್ಕ, ಧನ್ಯಾವತಿ ಕಡ್ಲೆ, ದಿವ್ಯಾ ಸುಷ್ಮಾ, ಸಂತೋಷ ಚಿತ್ರಾಪುರ, ಜ್ಯೋತಿ ಮಡಿವಾಳ ಸೇರಿದಂತೆ ಶ್ರೀವಲ್ಲಿ ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ಶಿಕ್ಷಕ–ಶಿಕ್ಷಕಿಯರು ಉಪಸ್ಥಿತರಿದ್ದರು.

Milad procession/ ಭಟ್ಕಳದಲ್ಲಿ ಅದ್ದೂರಿ ಮಿಲಾದ್ ಮೆರವಣಿಗೆ