ಭಟ್ಕಳ ಡೈರಿ ವರದಿ

ಭಟ್ಕಳ : ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಸುಧೀರ್ಘ ಅವಧಿಯವರೆಗೆ ಗಣಿತ ಶಿಕ್ಷಕರಾಗಿ, ನಂತರ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ (Retired Headmaster) ಗಣಪತಿ ಶಿರೂರು ಅವರನ್ನು ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಭಟ್ಕಳ ತಾಲೂಕ ಘಟಕದ ವತಿಯಿಂದ ಸನ್ಮಾನಿಸಲಾಯಿತು (Felicitation).

memorandum/ ಭಟ್ಕಳ ರಿಕ್ಷಾ ಚಾಲಕರ ಸಂಘದಿಂದ ಸಹಾಯಕ ಆಯುಕ್ತರಿಗೆ ಮನವಿ

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ತಾವು ವಿದ್ಯಾರ್ಥಿಯಾಗಿ ಕಲಿತಿರುವ ಸಂದರ್ಭದಲ್ಲಿ ಗಣಪತಿ ಶಿರೂರು ಅವರ ಗಣಿತ ವಿಷಯವನ್ನು ಸರಳವಾಗಿ ಬೋಧಿಸುವ ಬೋಧನಾ ಶೈಲಿ, ತನ್ಮೂಲಕವಾಗಿ ಅವರು ವಿದ್ಯಾರ್ಥಿಗಳಿಂದ ಗಳಿಸಿದ ಪ್ರೀತಿ ಮತ್ತು ಸಾoಸ್ಕೃತಿಕವಾಗಿ ನನ್ನನ್ನು ಒಳಗೊಂಡಂತೆ ಅವರು ವಿದ್ಯಾರ್ಥಿಗಳಿಗೆ ಗಾಯನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀಡುತ್ತಿದ್ದ ಪ್ರೋತ್ಸಾಹವನ್ನು ಸ್ಮರಿಸಿದರು.

‘Drugs Beda Bro’/ ಮಾದಕ ವ್ಯಸನದ ವಿರುದ್ಧ ಬಿಜೆಪಿ ಯುವಮೋರ್ಚಾದಿಂದ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನ

ಪತ್ರಕರ್ತ, ಕಸಾಪ ಆಜೀವ ಸದಸ್ಯ ಸತೀಶಕುಮಾರ್ ಮಾತನಾಡಿ ತಮ್ಮ ಅಂಜುಮನ್ ಕಾಲೇಜು ದಿನಗಳಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಗಣಪತಿ ಶಿರೂರು ಅವರ ಒಡನಾಟದ ಸಂದರ್ಭ ಸ್ಮರಿಸಿ ಅವರಲ್ಲಿನ ನಾಯಕತ್ವ ಗುಣವನ್ನು ಸ್ಮರಿಸಿದರರು.

Bike collision/ ಮುರ್ಡೇಶ್ವರದಲ್ಲಿ ಬೈಕ್ ಡಿಕ್ಕಿ: ಪಾದಚಾರಿ ಮಹಿಳೆಗೆ ಗಾಯ

ಸನ್ಮಾನ (Felicitation) ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಗಣಪತಿ ಶಿರೂರು, ಸಾಹಿತ್ಯ ಪರಿಷತ್ತು ನಮ್ಮ ಮನೆಗೆ ಬಂದು ಶಿಕ್ಷಣ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಗೌರವಿಸುತ್ತಿರುವುದು ತುಂಬಾ ಸಂತೋಷವನ್ನು ನೀಡಿದೆ. ಎಲ್ಲರೂ ಅಭಿಮಾನದಿಂದ ಮಾತನಾಡಿದ್ದನ್ನು ಕೇಳಿ ನಾನು ಇಷ್ಟೆಲ್ಲ ಪ್ರೀತಿ ಸಂಪಾದಿಸಿದ್ದೇನೆ ಎಂಬುದೇ ತುಂಬಾ ಖುಷಿ ಕೊಡುವ ಸಂಗತಿ. ನನ್ನ ಬದುಕಿಗೆ ಪ್ರೀತಿ ವಿಶ್ವಾಸದ ಜೊತೆಗೆ ಎಲ್ಲವನ್ನು ನೀಡಿದ ಭಟ್ಕಳದ ನೆಲಕ್ಕೆ ಸದಾ ಋಣಿ. ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದಲ್ಲದೆ ತನ್ನೆಲ್ಲ ಸಹಕಾರ ನೀಡುವುದಾಗಿ ನುಡಿದರು.

Milad procession/ ಭಟ್ಕಳದಲ್ಲಿ ಅದ್ದೂರಿ ಮಿಲಾದ್ ಮೆರವಣಿಗೆ

ಸಾಹಿತಿ ಮಾನಸುತ ಶಂಭು ಹೆಗಡೆ, ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಆಜೀವ ಸದಸ್ಯ ವೆಂಕಟೇಶ ನಾಯ್ಕ ಆಸರಕೇರಿ, ಹವ್ಯಾಸಿ ರಂಗಭೂಮಿ ಕಲಾವಿದ ವೆಂಕಟೇಶ ನಾಯ್ಕ ತಲಗೋಡು ಸಾಂದರ್ಭಿಕವಾಗಿ ಮಾತನಾಡಿದರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣಪತಿ ಶಿರೂರು ಪತ್ನಿ ಗೀತಾ ಉಪಸ್ಥಿತರಿದ್ದರು.

Bhatkal/ ಅತಿವೇಗದ ಕಾರು ಚಾಲನೆ: ಬೈಕ್ ಸವಾರನಿಗೆ ಗಂಭೀರ ಗಾಯ