ಭಟ್ಕಳ ಡೈರಿ ವರದಿ

ಭಟ್ಕಳ: ನಿನಾದ ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಸಂಜೆ ಮುಂಡಳ್ಳಿಯ ಉತ್ಥಾನ ಕಲಾ ಭವನದಲ್ಲಿ ರಕ್ಷಾ ಬಂಧನ (raksha bandhan) ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಂಡಳ್ಳಿ ಭಾಗದ ವಿದ್ಯಾರ್ಥಿಗಳಿಗಾಗಿ ಕಲಾವಿದ ಉಮೇಶ ಮುಂಡಳ್ಳಿ ಹಾಗೂ ರೇಷ್ಮಾ ಉಮೇಶ ದಂಪತಿ ಕಾರ್ಯಕ್ರಮ ಆಯೋಜಿಸಿದ್ದರು.

ಪರಸ್ಪರ ರಕ್ಷೆ ಕಟ್ಟಿಕೊಂಡ ವಿದ್ಯಾರ್ಥಿಗಳು:

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿಕೊಂಡು, ಸಿಹಿ ಹಂಚಿಕೊಳ್ಳುವ ಮೂಲಕ ರಕ್ಷಾ ಬಂಧನದ (raksha bandhan) ಸಂಭ್ರಮವನ್ನು ಹಂಚಿಕೊಂಡರು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸಹೋದರತ್ವ, ಪರಸ್ಪರ ಪ್ರೀತಿ ಮತ್ತು ಬಾಂಧವ್ಯದ ಭಾವನೆಗಳನ್ನು ಬೆಳೆಸುವ ಪ್ರಯತ್ನ ನಡೆಯಿತು.

ರಕ್ಷಾ ಬಂಧನದ ಮಹತ್ವದ ಕುರಿತು ಅರಿವು:

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಮುಂಡಳ್ಳಿ, ರಕ್ಷಾ ಬಂಧನದ ಹುಟ್ಟು, ಅದರ ಮಹತ್ವ ಹಾಗೂ ಪೌರಾಣಿಕ ಹಿನ್ನೆಲೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಹೋದರತ್ವ, ಪ್ರೀತಿ, ಪರಸ್ಪರ ಗೌರವ ಹಾಗೂ ರಕ್ಷಣೆಯ ಭಾವನೆಗಳನ್ನು ಬೆಳೆಸುವಲ್ಲಿ ರಕ್ಷಾ ಬಂಧನದ ಮಹತ್ವವನ್ನು ಅವರು ತಿಳಿಸಿದರು.

ದೇಶಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮ: ನಿನಾದ ಕಲ್ಚರಲ್ ಅಕಾಡೆಮಿಯ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜೇತ ನಾಯ್ಕ ವಂದಿಸಿದರು. ದೇಶಭಕ್ತಿ ಗೀತೆಯನ್ನು ನಿನಾದ ಹಾಡಿದರು.

ವಿದ್ಯಾರ್ಥಿಗಳಲ್ಲಿ ಸಹೋದರತ್ವ ಮತ್ತು ಪರಸ್ಪರ ಬಾಂಧವ್ಯದ ಭಾವನೆ ಮೂಡಿಸುವ ಮೂಲಕ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.

ಇದನ್ನೂ ಓದಿ : 

agricultural road/ ರೈತರ ಕೃಷಿ ರಸ್ತೆಗೆ ಅಡ್ಡಿ ಆರೋಪ: ತಹಶೀಲ್ದಾರ ಸ್ಥಳ ಪರಿಶೀಲನೆಗೆ ಆಗ್ರಹ

Tipper seized/ಅಧಿಕಾರ ವಹಿಸಿಕೊಂಡ ೨೪ ಗಂಟೆಯಲ್ಲೇ ಆರು ಟಿಪ್ಪರ್ ವಶ!

Normal rainfall/ ರಾಜ್ಯದ ಕರಾವಳಿಯಲ್ಲಿ ಮುಂದಿನ ಎರಡು ದಿನ ಸಾಮಾನ್ಯ ಮಳೆ