ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಮುರುಡೇಶ್ವರ (Murudeshwar) ಗ್ರಾಮದ ಮಾವಳ್ಳಿ–೨ ಕ್ಷೇತ್ರದ ಬೈಲಹೊಳೆ ಕಟ್ಟೆ ಸಮೀಪ ರೈತರು ಕೃಷಿ ಭೂಮಿಗೆ ತೆರಳಲು ಬಳಸುತ್ತಿರುವ ರಸ್ತೆ ಸಂಪರ್ಕಕ್ಕೆ(agricultural road) ಅಡ್ಡಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಟ್ಕಳ ತಹಶೀಲ್ದಾರರಿಗೆ (Bhatkal Tahsildar) ಮನವಿ (memorandum) ಸಲ್ಲಿಸಲಾಯಿತು. ಉಪ ತಹಸೀಲ್ದಾರ್ ರಜನಿ ದೇವಾಡಿಗ ಮನವಿ ಸ್ವೀಕರಿಸಿದರು.
Tipper seized/ಅಧಿಕಾರ ವಹಿಸಿಕೊಂಡ ೨೪ ಗಂಟೆಯಲ್ಲೇ ಆರು ಟಿಪ್ಪರ್ ವಶ!
₹೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ:
ಸುಮಾರು ೧೦ ವರ್ಷಗಳ ಹಿಂದೆ ಸರ್ಕಾರದ ₹೫೦ ಲಕ್ಷ ವೆಚ್ಚದ ಯೋಜನೆಯಡಿ ಸಣ್ಣ ಹಳ್ಳದ ಎರಡೂ ಬದಿಗಳಲ್ಲಿರುವ ರೈತರ ಕೃಷಿ ಭೂಮಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ರಸ್ತೆಯನ್ನು (agricultural road) ನಿರ್ಮಿಸಲಾಗಿತ್ತು. ರೈತರು ಟ್ರ್ಯಾಕ್ಟರ್, ಟಿಲ್ಲರ್, ಕೊಯ್ಲು ಯಂತ್ರ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಜಮೀನುಗಳಿಗೆ ಕೊಂಡೊಯ್ಯಲು ಈ ರಸ್ತೆಯನ್ನು ಬಳಸುತ್ತಿದ್ದಾರೆ.
Normal rainfall/ ರಾಜ್ಯದ ಕರಾವಳಿಯಲ್ಲಿ ಮುಂದಿನ ಎರಡು ದಿನ ಸಾಮಾನ್ಯ ಮಳೆ
ರಸ್ತೆ ಬಂದ್ ಮಾಡುವ ಪ್ರಯತ್ನ ಆರೋಪ: ಪ್ರಸ್ತುತ ಹಳ್ಳದ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸರ್ವೇ ನಂಬರ್ ೧೯೨/೩, ೧೯೩/೨ ಹಾಗೂ ೧೯೪/೩ರ ಜಮೀನು ಮಾಲೀಕರು, ಹಲವು ವರ್ಷಗಳಿಂದ ರೈತರು ಬಳಸಿಕೊಂಡು ಬರುತ್ತಿರುವ ರಸ್ತೆ ಮಾರ್ಗವನ್ನು ಬಂದ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
AITM/ ಎಐಟಿಎಂನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೨೬: ಆಂತರಿಕ ಸುತ್ತಿನ ಮೌಲ್ಯಮಾಪನ
ಕೃಷಿ ಚಟುವಟಿಕೆಗೆ ತೊಂದರೆ ಆತಂಕ:
ರಸ್ತೆ ಸಂಪರ್ಕ ಕಡಿತಗೊಂಡರೆ ಕೃಷಿ ಭೂಮಿಗೆ ಯಂತ್ರೋಪಕರಣಗಳು, ಗೊಬ್ಬರ, ಬೀಜ ಹಾಗೂ ಬೆಳೆಗಳನ್ನು ಸಾಗಿಸಲು ತೀವ್ರ ತೊಂದರೆಯಾಗಲಿದೆ. ಇದರಿಂದ ರೈತರು ಹೆಚ್ಚುವರಿ ವೆಚ್ಚ ಭರಿಸುವುದರೊಂದಿಗೆ ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
award/ ಜಿಲ್ಲಾ ಮಟ್ಟದ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿಗೆ ನಿನಾದ ಕಲ್ಚರಲ್ ಅಕಾಡೆಮಿ ಆಯ್ಕೆ
ಸ್ಥಳ ಪರಿಶೀಲನೆಗೆ ಆಗ್ರಹ: ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಹಲವು ವರ್ಷಗಳಿಂದ ರೈತರು ಬಳಸಿಕೊಂಡು ಬರುತ್ತಿರುವ ರಸ್ತೆ ಮಾರ್ಗಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಧು ನಾಯ್ಕ, ಸಂತೋಷ ನಾಯ್ಕ, ಭಾಸ್ಕರ ನಾಯ್ಕ, ಮಾರುತಿ ನಾರಾಯಣ ಮೊಗೇರ, ನಾಗಪ್ಪ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
felicitation/ ಕೆಡಿಸಿಸಿ ಬ್ಯಾಂಕ್ ನೌಕರರಿಂದ ಮಂಕಾಳ ವೈದ್ಯಗೆ ಸನ್ಮಾನ
