ಭಟ್ಕಳ ಡೈರಿ ವರದಿ

ಹೊನ್ನಾವರ: ಭಾರತೀಯ ಜನತಾ ಪಾರ್ಟಿಯ ಸಂಘಟನಾ ಸಪ್ತಾಹದ ಅಂಗವಾಗಿ ಬಿಜೆಪಿ ಯುವಮೋರ್ಚಾ ಹೊನ್ನಾವರ ಮಂಡಲದ ವತಿಯಿಂದ ಆಯೋಜಿಸಲಾದ ‘ಡ್ರಗ್ಸ್ ಬೇಡ ಬ್ರೋ – ಪೋಸ್ಟರ್ ಅಭಿಯಾನ’ ಅರೇಅಂಗಡಿ, ಸಂತೆಗುಳಿ ಹಾಗೂ ಕವಲಕ್ಕಿ ಭಾಗಗಳಲ್ಲಿ ಯಶಸ್ವಿಯಾಗಿ ನಡೆಯಿತು.

ಅಭಿಯಾನದ ಅಂಗವಾಗಿ ವಿವಿಧೆಡೆ **‘ಡ್ರಗ್ಸ್ ಬೇಡ ಬ್ರೋ’ ಎಂಬ ಸಂದೇಶ ಸಾರುವ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣದ ಅಗತ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ, ಮಾದಕ ವಸ್ತುಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಲಾಯಿತು. ಸಾರ್ವಜನಿಕರಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಂದೇಶ ಪತ್ರಗಳನ್ನು ವಿತರಿಸಲಾಯಿತು.

ಹೊಸಾಕುಳಿಯಲ್ಲಿ ಮಾದಕ ವಸ್ತುಗಳ ದಹನ:

ಅಭಿಯಾನದ ವಿಶೇಷ ಭಾಗವಾಗಿ ಹೊಸಾಕುಳಿಯಲ್ಲಿ ಮಾದಕ ವಸ್ತುಗಳ ದಹನ ಕಾರ್ಯಕ್ರಮ ನಡೆಸಲಾಯಿತು. ಈ ಮೂಲಕ ಮಾದಕ ವ್ಯಸನದ ವಿರುದ್ಧ ಗಂಭೀರ ಸಾಮಾಜಿಕ ಸಂದೇಶ ಸಾರಲಾಯಿತು. ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಸಶಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಹೊನ್ನಾವರ ಮಂಡಲ ಅಧ್ಯಕ್ಷ ಯೋಗೇಶ ಮೇಸ್ತ, ನಿಕಟಪೂರ್ವ ಅಧ್ಯಕ್ಷ ರಾಜೇಶ ಭಂಡಾರಿ, ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ಗೌಡ ಹಾಗೂ ಗಣಪತಿ ನಾಯ್ಕ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೂರ್ತಿ ಹೆಗಡೆ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಮೋದ ನಾಯ್ಕ, ಜಿಲ್ಲಾ ಯುವಮೋರ್ಚಾ ಖಜಾಂಚಿ ಕಿರಣ ಹೆಗಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಕಲಾ ಶಾಸ್ತ್ರಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಹೊನ್ನಾವರ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಜನಿ ನಾಯ್ಕ, ಓಬಿಸಿ ಮೋರ್ಚಾ ಅಧ್ಯಕ್ಷ ಗಜಾನನ ಮಡಿವಾಳ, ಯುವಮೋರ್ಚಾ ಮಾಜಿ ಅಧ್ಯಕ್ಷ ಸಚಿನ್ ಶೇಟ, ಯುವಮೋರ್ಚಾ ಅಧ್ಯಕ್ಷ ಶಿವಾನಂದ ಮರಾಠಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಗಡೆ, ಮಾರುತಿ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದೇ ವೇಳೆ ಪಕ್ಷದ ಪ್ರಮುಖರಾದ ಮಾರುತಿ ನಾಯ್ಕ, ಎಂ ಎಸ್ ಹೆಗಡೆ ಕಣ್ಣಿ, ಎನ್ ಎಸ್ ಹೆಗಡೆ ಹಾಗೂ ಸ್ಥಳೀಯ ಮುಖಂಡರಾದ ಸುರೇಶ ಶೆಟ್ಟಿ, ಎಂ ಎಸ್ ಹೆಗಡೆ, ಎಂ ಆರ್ ಹೆಗಡೆ, ಮಾನಸ ಹೆಗಡೆ, ವಿಶ್ವನಾಥ ಹೆಗಡೆ, ರವಿ ನಾಯ್ಕ, ಎಂ ಜಿ ಭಟ್ಟ ಮುಗ್ವಾ ಹಾಗೂ ಗಣೇಶ ಮುಗ್ವಾ ಉಪಸ್ಥಿತರಿದ್ದರು.

ಯುವಮೋರ್ಚಾ ಪದಾಧಿಕಾರಿಗಳಾದ ಗಿರೀಶ ನಾಯ್ಕ, ಆನಂದು ಮೊಗೇರ, ರಾಘವೇಂದ್ರ ಹೆಗಡೆ, ಅಜಿತ್ ಹೆಗಡೆ, ಸಂದೇಶ ನಾಯ್ಕ, ಶ್ರೀನಿವಾಸ ಗೌಡ ಹಾಗೂ ಶ್ರೀಧರ ಮುಕ್ರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ :

ಗಣೇಶೋತ್ಸವ ಸಮಿತಿಗಳ ಶಾಂತಿ ಸಭೆ; ವಿಸರ್ಜನೆ ಮಾರ್ಗ ಬದಲಿಸದಂತೆ ಪೊಲೀಸ್ ಇಲಾಖೆ ಸೂಚನೆ

ಭಟ್ಕಳಕ್ಕೆ ಯುವ ಐಪಿಎಸ್ ಅಧಿಕಾರಿ ರಾನು ಗುಪ್ತಾ ನೇಮಕ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ 

ಗುರುವೆಂದರೆ ಹೀಗೆ: ಬದುಕಿನ ದಾರಿಗೆ ಬೆಳಕು ತೋರಿದ ಗುರುಗಳ ನೆನಪು | ಶಿಕ್ಷಕರ ದಿನಾಚರಣೆಯ ವಿಶೇಷ ಲೇಖನ

Honnavar BJP/ ಕಾರವಾರದಲ್ಲಿ ಸರಣಿ ಹೋರಾಟಕ್ಕೆ ಹೊನ್ನಾವರ ಬಿಜೆಪಿ ಬೆಂಬಲ