ಭಟ್ಕಳ ಡೈರಿ ವರದಿ
ಮೈಸೂರು: ಮೈಸೂರು ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ೨ರಂದು ಸಂಚರಿಸಲಿರುವ ಮುರುಡೇಶ್ವರ–ಬೆಂಗಳೂರು ಹಾಗೂ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಂಗಳೂರು–ಮುರುಡೇಶ್ವರ ರೈಲು ಮಾರ್ಗ ಬದಲಾವಣೆ: ಅಕ್ಟೋಬರ್ ೨ರಂದು ಸಂಚರಿಸಲಿರುವ ರೈಲು ಸಂಖ್ಯೆ ೧೬೫೮೫ ಎಸ್ಎಮ್‌ವಿಟಿ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು–ನೆಲಮಂಗಲ–ಶ್ರವಣಬೆಳಗೊಳ–ಹಾಸನ ಮಾರ್ಗವಾಗಿ ಸಂಚರಿಸಲಿದೆ. ಈ ಮಾರ್ಗ ಬದಲಾವಣೆಯಿಂದ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಕೃಷ್ಣರಾಜನಗರ ಹಾಗೂ ಹೊಳೆನರಸೀಪುರ ನಿಲ್ದಾಣಗಳಲ್ಲಿ ರೈಲಿಗೆ ನಿಗದಿಯಾಗಿದ್ದ ನಿಲುಗಡೆ ಇರುವುದಿಲ್ಲ.
ಮುರುಡೇಶ್ವರ–ಬೆಂಗಳೂರು ರೈಲು ಮಾರ್ಗ ಬದಲಾವಣೆ: ಅದೇ ದಿನ ಹೊರಡುವ ರೈಲು ಸಂಖ್ಯೆ ೧೬೫೮೬ ಮುರುಡೇಶ್ವರ–ಎಸ್ಎಮ್‌ವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಹಾಸನ–ಶ್ರವಣಬೆಳಗೊಳ–ನೆಲಮಂಗಲ–ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲಿಗೂ ಹೊಳೆನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ ಹಾಗೂ ಕೆಂಗೇರಿ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
ಪ್ರಯಾಣಿಕರಿಗೆ ಸೂಚನೆ:
ಅಕ್ಟೋಬರ್ ೨ರಂದು ಈ ರೈಲುಗಳಲ್ಲಿ ಪ್ರಯಾಣಿಸುವವರು ಮಾರ್ಗ ಬದಲಾವಣೆ ಹಾಗೂ ನಿಲುಗಡೆ ರದ್ದಾಗಿರುವುದನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ :


