ಭಟ್ಕಳ ಡೈರಿ ವರದಿ

ಭಟ್ಕಳ: ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಭಟ್ಕಳ ತಾಲೂಕಿನ ಶಿರಾಲಿಯ ಎಮ್.ಜಿ. ಪಾರ್ಟ್‌ ಹತ್ತಿರ ವಾಸವಾಗಿರುವ ಅಪ್ಪಾಜಿ ಗಣಪತಿ ಗಣಾಚಾರಿ (೩೮) ಎಂದು ಗುರುತಿಸಲಾಗಿದೆ. ಅವರು ಗುಜರಿ ಕೆಲಸ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪತ್ನಿ ಸರ್ವಮಂಗಳ ಅವರು ನೀಡಿದ ದೂರಿನ ಪ್ರಕಾರ, ಅಪ್ಪಾಜಿ ಅವರು ಶಿರಾಲಿಯಲ್ಲಿರುವ ಬಾಡಿಗೆ ಮನೆಯಿಂದ ಕೆಲಸ ಇದೆ ಎಂದು ಹೇಳಿ ತೆರಳಿದ್ದರು. ಆದರೆ ಬಳಿಕ ಮನೆಗೆ ವಾಪಸ್ ಬಂದಿಲ್ಲ. ಅಲ್ಲದೆ, ಸಂಬಂಧಿಕರ ಮನೆಗಳಿಗೂ ಅವರು ತೆರಳಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅವರು ಎಲ್ಲಿಗೆ ತೆರಳಿದ್ದಾರೆ ಎಂಬುದು ತಿಳಿದುಬಂದಿಲ್ಲ.

ನಾಪತ್ತೆಯಾಗಿರುವ ಪತಿಯನ್ನು ಹುಡುಕಿ ಪತ್ತೆಹಚ್ಚಿ ಕೊಡಬೇಕು ಎಂದು ಸರ್ವಮಂಗಳ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: 

ಕಾರು ಪಡೆದು ಶಿರಾಳಕೊಪ್ಪದಲ್ಲಿ ಅಡವಿಟ್ಟ ಆರೋಪ; ಭಟ್ಕಳ ಠಾಣೆಗೆ ದೂರು

ಭಟ್ಕಳದಲ್ಲಿ ನಿಲ್ಲಿಸಿದ್ದ ಟ್ರಾವೆಲರ್ ಮಿನಿ ಬಸ್ ಕಳವು

ಭಟ್ಕಳದಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ ಹಲ್ಲೆ; ಕತ್ತಿಯಿಂದ ಕೊಲೆ ಬೆದರಿಕೆ ಆರೋಪ

ಸ್ಕೂಟಿಗೆ ಅಡ್ಡಗಟ್ಟಿ ಮಹಿಳೆ ಮೇಲೆ ಹಲ್ಲೆ; ಇಬ್ಬರ ವಿರುದ್ಧ ದೂರು