ಭಟ್ಕಳ ಡೈರಿ ವರದಿ

ಹೊನ್ನಾವರ: ಶರನ್ನವರಾತ್ರಿ ಉತ್ಸವದ ಎಂಟನೇ ದಿನವಾದ ಅಕ್ಟೋಬರ್ ೧೮ರಂದು, ಹೊನ್ನಾವರ ತಾಲೂಕಿನ ಕೆರೆಕೋಣ ಕೊಂತಪಾಲದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಜಿಲ್ಲೆಯ ಆಯ್ದ ಗಾಯಕರ ಸಮ್ಮಿಲನದಲ್ಲಿ ಸುಮಧುರ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ಹೊನ್ನಾವರದ ನರಸಿಂಹ ನಾಯ್ಕ ಹರಡೆ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ಗಾಯಕರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ, ನೆರೆದಿದ್ದ ಭಕ್ತರು ಹಾಗೂ ಸಂಗೀತಾಸಕ್ತರ ಮನಸೂರೆಗೊಂಡರು.

ಗಾಯಕ ಮಾರುತಿ ನಾಯ್ಕ ಹಿರೇಬೈಲು, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಭಟ್ಕಳ ಹಾಗೂ ಸಂಗೀತ ಶಿಕ್ಷಕಿಯಾಗಿರುವ ಗಾಯಕಿ ಮಧುರಾ ನಾಯ್ಕ ತಮ್ಮ ಸುಮಧುರ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ವಾದ್ಯಸಂಗೀತದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ ಮಹಾಲೆ ಕುಮಟಾ ಅವರು ಕೀಬೋರ್ಡ್‌ನಲ್ಲಿ, ಮಧುರಾ ನಾಯ್ಕ ಅಳ್ಳಂಕಿ ಅವರು ಹಾರ್ಮೋನಿಯಂನಲ್ಲಿ ಹಾಗೂ ಪ್ರದೀಪ ಭಂಡಾರಿ ಹೊನ್ನಾವರ ಅವರು ತಬಲದಲ್ಲಿ ಸಹಕರಿಸಿದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಭಕ್ತಿಸಂಗೀತ ಕಾರ್ಯಕ್ರಮವು ಭಕ್ತಿಭಾವದ ವಾತಾವರಣವನ್ನು ಸೃಷ್ಟಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಭಾಗವಹಿಸಿದ ಕಲಾವಿದರನ್ನು ಗೌರವಿಸಲಾಯಿತು.

ಇದನ್ನೂ ಓದಿ :

ಭಟ್ಕಳದಲ್ಲಿ ಕಳೆದ ವಾರ ಏನೇನಾಯಿತು? ಅಪರಾಧ ಪ್ರಕರಣಗಳಿಂದ ವಿದ್ಯಾರ್ಥಿಗಳ ಸಾಧನೆಯವರೆಗೆ ಸಮಗ್ರ ನೋಟ

ಭಟ್ಕಳ ಮಾರಿಯಮ್ಮನ ವಿಸರ್ಜನಾ ಸ್ಥಳ, ಮಾರ್ಗದ ನೋಂದಣಿಗೆ ದೇವಸ್ಥಾನ ಟ್ರಸ್ಟ್ ಮನವಿ