ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನವೆಂಬರ್ ೧ರಂದು ಭಟ್ಕಳದಲ್ಲಿ ಭವ್ಯ ಪಥಸಂಚಲನ ನಡೆಯಲಿದೆ. ಪಥಸಂಚಲನದ ಹಿನ್ನೆಲೆಯಲ್ಲಿ ಸಂಘದ ಪ್ರಮುಖರು ಹಾಗೂ ಕಾರ್ಯಕರ್ತರು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಮಧ್ಯಾಹ್ನ ೩.೧೫ಕ್ಕೆ ಪಥಸಂಚಲನ: ನವೆಂಬರ್ ೧ರ ಭಾನುವಾರ ಮಧ್ಯಾಹ್ನ ೩.೧೫ಕ್ಕೆ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಪಥಸಂಚಲನ ಆರಂಭವಾಗಲಿದೆ. ಅಲ್ಲಿಂದ ಹೂವಿನ ಮಾರುಕಟ್ಟೆ ಮಾರ್ಗವಾಗಿ ಮಾರಿಕಾಂಬಾ ದೇವಸ್ಥಾನ, ಜನತಾ ಬ್ಯಾಂಕ್, ನೆಹರು ರಸ್ತೆ, ವಿವಿ ರಸ್ತೆ, ರಘುನಾಥ ರಸ್ತೆ ಹಾಗೂ ಮುಖ್ಯ ರಸ್ತೆಯ ಮೂಲಕ ಪಥಸಂಚಲನ ಸಾಗಲಿದೆ. ಮುಂದೆ ಹಳೆ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಸಾಗರ ರಸ್ತೆ ಮೂಲಕ ಗುರುಸುಧೀಂದ್ರ ಕಾಲೇಜು ಆವರಣವನ್ನು ತಲುಪಲಿದೆ.

ಗುರುಸುಧೀಂದ್ರ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ: ಪಥಸಂಚಲನದ ಬಳಿಕ ಗುರುಸುಧೀಂದ್ರ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪಥಸಂಚಲನದಲ್ಲಿ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘದ ಪ್ರಮುಖರು ಹಾಗೂ ಕಾರ್ಯಕರ್ತರು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.

ಭಟ್ಕಳ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಸಾಗಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಮಯದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ವ್ಯವಸ್ಥೆಗೆ ಸಹಕರಿಸುವಂತೆ ಸಂಘಟಕರು ಕೋರಿದ್ದಾರೆ.

ಇದನ್ನೂ ಓದಿ :

ಭಟ್ಕಳದಲ್ಲಿ ನ.೧ರಂದು ಆರ್‌ಎಸ್‌ಎಸ್ ಭವ್ಯ ಪಥಸಂಚಲನ: ಗಣವೇಷ ಖರೀದಿಗೆ ವ್ಯವಸ್ಥೆ

ಸರ್ಪನಕಟ್ಟೆಯಲ್ಲಿ ‘ಸಂಭವಾಮಿ ಯುಗೇ ಯುಗೇ’ ಪೋಸ್ಟರ್ ಬಿಡುಗಡೆ; ದೈವ ಸಂಕಲ್ಪ ಕಲಾ ಬಳಗದ ಹೊಸ ನಾಟಕಕ್ಕೆ ಭರ್ಜರಿ ಸಿದ್ಧತೆ