ಭಟ್ಕಳ ಡೈರಿ ವರದಿ

ಭಟ್ಕಳ: ನವೆಂಬರ್ ೧ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಭವ್ಯ ಪಥಸಂಚಲನಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಸ್ವಯಂಸೇವಕರಿಗೆ ಗಣವೇಷ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ.

ಭಟ್ಕಳ ಚೆನ್ನಪಟ್ಟಣದ ಹನುಮಂತ ದೇವಸ್ಥಾನದ ಮಾರಿಕಾಂಬಾ ಸಭಾಭವನದಲ್ಲಿ ಗಣವೇಷ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗಣವೇಷ ಖರೀದಿಸಲು ಪ್ರತಿದಿನ ಸಂಜೆ ೬.೩೦ರಿಂದ ರಾತ್ರಿ ೮.೩೦ರವರೆಗೆ ಅವಕಾಶವಿರಲಿದೆ.

ನವೆಂಬರ್ ೧ರಂದು ನಡೆಯಲಿರುವ ಪಥಸಂಚಲನದಲ್ಲಿ ಭಾಗವಹಿಸಲಿರುವ ಎಲ್ಲಾ ಸ್ವಯಂಸೇವಕರು ನಿಗದಿತ ಸಮಯದಲ್ಲಿ ಸಭಾಭವನಕ್ಕೆ ಆಗಮಿಸಿ ಗಣವೇಷ ಖರೀದಿಸಿಕೊಳ್ಳುವಂತೆ ಸಂಘದ ವತಿಯಿಂದ ವಿನಂತಿಸಲಾಗಿದೆ. ಭಟ್ಕಳದಲ್ಲಿ ಪಥಸಂಚಲನದ ಸಿದ್ಧತೆಗಳು ಚುರುಕುಗೊಂಡಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ವಯಂಸೇವಕರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ :

ಭಟ್ಕಳದ ಸಮುದ್ರ ಕಣ್ಣೀರಾಗುತ್ತಿದೆ: ಮೀನುಗಾರರ ಬದುಕಿಗೆ ಸುರಕ್ಷತೆ ಯಾವಾಗ?

ಭಟ್ಕಳದ ಜಾಲಿ ಗ್ರಾಮದ ಭಾರತಿ ನಾಯ್ಕಗೆ ಡಾಕ್ಟರೇಟ್ ಗೌರವ; ಐದು ವರ್ಷಗಳ ಸಂಶೋಧನೆಗೆ ಮನ್ನಣೆ