ಭಟ್ಕಳ ಡೈರಿ ವರದಿ
ಭಟ್ಕಳ: ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ವಾಹನ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಹೆಬ್ಬಳೆಯ ಹೊನ್ನೆಗದ್ದೆ ನಿವಾಸಿ ಪದ್ಮಾವತಿ ಗೋವಿಂದ ನಾಯ್ಕ (೪೮) ಮೃತಪಟ್ಟವರು.
ಅಕ್ಟೋಬರ್ ೧೮ರಂದು ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇಬ್ರಾಹಿಂ ಖಲೀಫಾ (೬೦) ಎಂಬವರು ಅಂಜುಮಾನ್ ಸ್ಕೂಲ್ ವ್ಯಾನ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಭಟ್ಕಳದ ಸಂಶುದ್ದೀನ್ ಸರ್ಕಲ್ ಕಡೆಯಿಂದ ಮುರುಡೇಶ್ವರದತ್ತ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಜಾಲಿ ಕ್ರಾಸ್ ಸಮೀಪ ಹೆದ್ದಾರಿ ದಾಟಿ ಜಾಲಿ ಕಡೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ೬೬ರ ಮಧ್ಯದ ಡಿವೈಡರ್ನ ಅಂತರದಲ್ಲಿ ನಿಂತಿದ್ದ ಪದ್ಮಾವತಿ ಅವರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಪದ್ಮಾವತಿ ಅವರ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಮಾದೇವ ನಾಗಪ್ಪ ನಾಯ್ಕ ಅವರು ಭಟ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ :
ಗಾಣಿಗ ಸಮಾಜದ ಪ್ರತಿಭೆ – ಸಾಧನೆಗೆ ಭಟ್ಕಳದಲ್ಲಿ ಸನ್ಮಾನದ ಸ್ಪರ್ಶ
ಭಟ್ಕಳ ರಾಜಕೀಯದಲ್ಲಿ ಚರ್ಚೆಗೆ ಬರುತ್ತಿರುವ ಹೆಸರು; ಸೈನಿಕ ಸೇವೆಯಿಂದ ಸಂಘಟನೆಯ ಮುಂಚೂಣಿಗೆ ಶ್ರೀಕಾಂತ ನಾಯ್ಕ




