ಭಟ್ಕಳ ಡೈರಿ ವರದಿ

ಭಟ್ಕಳ: ಸಮುದ್ರದ ಅಲೆಗಳ ನಡುವೆ ಮುಳುಗುವ ಸ್ಥಿತಿಗೆ ತಲುಪಿದ್ದ ಬೆಂಗಳೂರಿನ ಪ್ರವಾಸಿಗನೊಬ್ಬನನ್ನು ಮುರುಡೇಶ್ವರ ಬೀಚ್‌ನ ಜೀವ ರಕ್ಷಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಸೋಮವಾರ ಬೆಳಿಗ್ಗೆ ಸುಮಾರು ೧೦:೧೫ರ ವೇಳೆಗೆ ನಡೆದಿದೆ.

ಬೆಂಗಳೂರಿನಿಂದ ಮೂವರು ಸ್ನೇಹಿತರು ಪ್ರವಾಸಕ್ಕಾಗಿ ಮುುುರುಡೇಶ್ವರ ಬೀಚ್‌ಗೆ ಬಂದಿದ್ದರು. ಈ ವೇಳೆ ಅವರ ಪೈಕಿ ಓರ್ವ ವ್ಯಕ್ತಿ ಸಮುದ್ರದ ನೀರಿನಲ್ಲಿ ಮುಳುಗುತ್ತಿರುವುದನ್ನು ಜೀವ ರಕ್ಷಕ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಸಮುದ್ರಕ್ಕೆ ತೆರಳಿ ಪ್ರವಾಸಿಗನನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.

ರಕ್ಷಣೆಗೊಳಗಾದ ಪ್ರವಾಸಿಗನನ್ನು ಬೆಂಗಳೂರಿನ ಆರ್.ಆರ್. ನಗರದ ತುಗಹಳ್ಳಿ ನಿವಾಸಿ ದಿಲೀಪ್ ಕುಮಾರ್ ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಜೀವ ರಕ್ಷಕರಾದ ವಿನೋದ್ ಹರಿಕಾಂತ, ರವೀಂದ್ರ ಹರಿಕಾಂತ, ಮುದಾಸಿರ್ ಬುಡ್ನ ಹಾಗೂ ಗೌರೀಶ್ ಹರಿಕಾಂತ ಪಾಲ್ಗೊಂಡಿದ್ದರು.

ಜೀವ ರಕ್ಷಕ ಸಿಬ್ಬಂದಿಯ ಮೇಲ್ವಿಚಾರಕ ಸುಧಾಕರ ಹಳ್ಳೇರ, ಹೋಂ ಗಾರ್ಡ್ ದತ್ತಾತ್ರೇಯ ಬಂಡಾರಿ ಹಾಗೂ ಪೊಲೀಸ್ ಸಿಬ್ಬಂದಿ ಅಣ್ಣಪ್ಪ ಎಂ. ನಾಯ್ಕ್ ಅವರು ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು. ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗಿ ಪ್ರವಾಸಿಗನ ಜೀವ ಉಳಿಸಿದ ಜೀವ ರಕ್ಷಕ ಸಿಬ್ಬಂದಿ ಹಾಗೂ ಸಹಕರಿಸಿದ ಪೊಲೀಸ್ ಮತ್ತು ಹೋಂ ಗಾರ್ಡ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ :

ಭಟ್ಕಳ ಜಾಲಿ ಕ್ರಾಸ್ ಬಳಿ ಅಪಘಾತ: ಮಹಿಳೆ ಸಾವು

ಗಾಣಿಗ ಸಮಾಜದ ಪ್ರತಿಭೆ – ಸಾಧನೆಗೆ ಭಟ್ಕಳದಲ್ಲಿ ಸನ್ಮಾನದ ಸ್ಪರ್ಶ