ಭಟ್ಕಳ ಡೈರಿ ವರದಿ
ಮುರುಡೇಶ್ವರ: ರಸ್ತೆಗೆ ಅಡ್ಡಲಾಗಿ ನಾಯಿ ಬಂದ ಪರಿಣಾಮ ಸ್ಕೂಟಿಯನ್ನು ಏಕಾಏಕಿ ತಿರುಗಿಸಿದಾಗ, ಮತ್ತೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಮುರುಡೇಶ್ವರದ ಕನ್ನಡ ಶಾಲೆಯ ಕಂಪರ್ಟ್ ಲಾಡ್ಜ್ ಸಮೀಪ ನಡೆದಿದೆ. ನವೆಂಬರ್ ೧೪ರಂದು ರಾತ್ರಿ ಸುಮಾರು ೧೧.೩೦ ಗಂಟೆಗೆ ಈ ಘಟನೆ ಸಂಭವಿಸಿದೆ.
ಬಸ್ತಿ ಗ್ರಾಮದ ಬಿದ್ರಮನೆ-೨ ನಿವಾಸಿ ರಾಮಕೃಷ್ಣ ನಾರಾಯಣ ಮೊಗೇರ (೬೩) ಅವರು ತಮ್ಮ ಸ್ಕೂಟಿಯನ್ನು ಮುರ್ಡೇಶ್ವರ ಕಡೆಯಿಂದ ಬಸ್ತಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕನ್ನಡ ಶಾಲೆಯ ಕಂಪರ್ಟ್ ಲಾಡ್ಜ್ ಸಮೀಪ ರಸ್ತೆಗೆ ಅಡ್ಡಲಾಗಿ ನಾಯಿ ಬಂದಿದ್ದು, ಅದನ್ನು ತಪ್ಪಿಸಲು ಸ್ಕೂಟಿಯನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ಸಂದರ್ಭದಲ್ಲಿ ಮುಂದೆ ಹೋಗುತ್ತಿದ್ದ ಮಂಜುನಾಥ ರಾಮಕೃಷ್ಣ ಮೊಗೇರ (೩೪) ಅವರ ಸ್ಕೂಟಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಂಜುನಾಥ ಅವರ ತಲೆ, ಹಣೆ ಹಾಗೂ ಬಲಕೈಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಾಳುವಿನ ಸಹೋದರ ಕೃಷ್ಣ ಮೊಗೇರ (೩೩) ಅವರು ರಾಮಕೃಷ್ಣ ಮೊಗೇರ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಕೂಟಿಯನ್ನು ದುಡುಕು ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಭಟ್ಕಳ ಜಾಲಿಕೋಡಿಯಲ್ಲಿ ಆಟೋರಿಕ್ಷಾ ಪಲ್ಟಿ; ಇಬ್ಬರು ಮಹಿಳೆಯರಿಗೆ ಗಾಯ
ಅಕ್ರಮವಾಗಿ ಕಟ್ಟಿಹಾಕಿದ್ದ ಮೂರು ಹೋರಿ ರಕ್ಷಣೆ; ಮಾಂಸ ಕತ್ತರಿಸುವ ಉಪಕರಣಗಳು ವಶಕ್ಕೆ




