ಭಟ್ಕಳ ಡೈರಿ ವರದಿ

ಭಟ್ಕಳ: ತಾಂತ್ರಿಕ ಶಿಕ್ಷಣವನ್ನು ತರಗತಿಯ ಪಾಠಕ್ಕೆ ಸೀಮಿತಗೊಳಿಸದೆ ಪ್ರಾಯೋಗಿಕ ಅನುಭವದ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸುವ ಉದ್ದೇಶದಿಂದ ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ)ನ ಐಒಟಿ ಕ್ಲಬ್ ವತಿಯಿಂದ ‘ಆರ್ಡುಯಿನೊ ಕಿಕ್‌ಸ್ಟಾರ್ಟ್’ ಕಾರ್ಯಾಗಾರ ಆಯೋಜಿಸಲಾಯಿತು.

ನವೆಂಬರ್ ೧೬, ೨೦೨೬ರಂದು ಅಂಜುಮನ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆದ ಕಾರ್ಯಕ್ರಮದಲ್ಲಿ ಆರ್ಡುಯಿನೊ, ಎಲೆಕ್ಟ್ರಾನಿಕ್ಸ್ ಮತ್ತು ಮೈಕ್ರೋಕಂಟ್ರೋಲರ್ ತಂತ್ರಜ್ಞಾನದ ಮೂಲಭೂತ ಅಂಶಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಯಿತು. ಅಲ್ಲದೆ, ಎಂಬೆಡೆಡ್ ತಂತ್ರಜ್ಞಾನದ ನೈಜ ಜೀವನದ ಅನ್ವಯಿಕೆಗಳು ಹಾಗೂ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ರೂಪಿಸುವ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಎಐಟಿಎಂ ಪ್ರಾಂಶುಪಾಲ ಡಾ. ಕೆ. ಫಜಲುರ್ ರಹಮಾನ್, ಅಂಜುಮನ್ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್ ಗಸ್ಸಾನ್ ಹಾಗೂ ಎಐಟಿಎಂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕಿರಣ ವಿ. ಶಾನಭಾಗ ಉಪಸ್ಥಿತರಿದ್ದರು. ಯುವ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಕೌಶಲ ಬೆಳೆಸುವಲ್ಲಿ ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ಅವರು ಒತ್ತಿಹೇಳಿದರು.

ಐಒಟಿ ಕ್ಲಬ್‌ನ ಸಂಯೋಜಕ ಪ್ರೊ. ಶ್ರೀಶೈಲ ಭಟ್ ಮಾರ್ಗದರ್ಶನ ನೀಡಿದರು. ಕ್ಲಬ್‌ನ ಅಧ್ಯಕ್ಷ ಸಲ್ಸಬೀಲ್ ಕೊಬಟ್ಟೆ ವಿದ್ಯಾರ್ಥಿ ತಂಡವನ್ನು ಮುನ್ನಡೆಸಿದರು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ದೇವಿನಗರ ಹಿಂದೂ ರುದ್ರಭೂಮಿಗೆ ಸ್ವಚ್ಛತೆಯ ಸ್ಪರ್ಶ; ದಯಾ ನಾಯ್ಕ ಮುತುವರ್ಜಿ

ಮುರುಡೇಶ್ವರದಲ್ಲಿ ರಾತ್ರಿ ಪೊಲೀಸ್ ಗಸ್ತು ಹೆಚ್ಚಳ: ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ