ಮುಂಡಗೋಡ : ಉಮ್ರಾ ಯಾತ್ರೆಗೆ ತೆರಳಿದ್ದ ಮುಂಡಗೋಡಿನ ಒಂದೇ ಕುಟುಂಬದ ಮೂವರು ಸೌದಿ ಅರೇಬಿಯಾದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೌದಿ ಅರೇಬಿಯದ ಮದೀನಾದಲ್ಲಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ಶಿಲಾಯುಗದ ಅತೀ ದೊಡ್ಡ ಬಂಡೆಚಿತ್ರ ನೆಲೆ ಶೋಧ !
ಮುಂಡಗೋಡ ಪಟ್ಟಣದ ರೋಣ ಮೆಡಿಕಲ್ನ ಮಾಲಕ ಫಯಾಝ್ ರೋಣ (45), ಪತ್ನಿ ಅಫ್ರೀನ್ (42) ಹಾಗೂ ಸಹೋದರನ ಮಗ ಐವಾನ್ (16) ಮೃತ ದುರ್ದೈವಿಗಳು. ಮೃತ ಫಯಾಜ್ ಉಮ್ರಾ ಯಾತ್ರೆಯನ್ನು ಪೂರೈಸಲು ಮುಂಡಗೋಡದಿಂದ ದಮಾಮಗೆ ತೆರಳಿದ್ದರು. ಶನಿವಾರ ಅವರು ತಮ್ಮ ಧರ್ಮಪತ್ನಿ ಆಫ್ರೀನ್, ಎರಡು ಗಂಡು ಮಕ್ಕಳು, ಅಣ್ಣ ಇಮ್ತಿಯಾಜ್, ಇಮ್ತಿಯಾಜ ರ ಧರ್ಮಪತ್ನಿ, ಇಮ್ತಿಯಾಜರ ಹಿರಿಯ ಮಗ ಐವಾನ ಹಾಗೂ ಅವರ ಮೂರು ಮಕ್ಕಳೊಂದಿಗೆ ಸೌದಿ ಅರೇಬಿಯಾದಲ್ಲಿ ಇರುವ ಮದಿನಾಕ್ಕೆ ವಾಹನದಲ್ಲಿ ತೆರಳಿದ್ದರು. ಮದಿನಾ ಕೇವಲ ೭೦ ಕಿಮೀ ದೂರವಿದ್ದಾಗ ವಾಹನದ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಸ್ಥಳದಲ್ಲಿಯೇ ಫಯಾಜ, ಆಫ್ರೀನ್ ಹಾಗೂ ಐವಾನ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.