ಭಟ್ಕಳ: ತಾಲೂಕಿನ ಮುಂಡಳ್ಳಿ ನೀರಗದ್ದೆ ಗ್ರಾಮದಲ್ಲಿ ಪತಿಯ ನಿರಂತರ ಹಿಂಸೆ ತಾಳಲಾರದೆ ೩೨ ವರ್ಷದ ಸವಿತಾ ಸೋಮಯ್ಯ ನಾಯ್ಕ ಗುರುವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (sad news).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮದುವೆಯಾದಂದಿನಿಂದಲೇ ಗಂಡ ಸೋಮಯ್ಯ ಅತಿಯಾದ ಸಂಶಯ ಪಟ್ಟು, ನಿರಂತರವಾಗಿ ಹೊಡೆದು–ಬೇಸಿಗೆಗೊಳಿಸುತ್ತಿದ್ದನೆಂದು ಕುಟುಂಬದವರು ಆರೋಪಿಸಿದ್ದಾರೆ. ದೈಹಿಕ–ಮಾನಸಿಕ ಹಿಂಸೆಗೆ ಬೇಸತ್ತು ತಾಳ್ಮೆ ಕಳೆದುಕೊಂಡ ಸವಿತಾ ಕೊನೆಗೆ ಜೀವನಕ್ಕೇ ವಿದಾಯ ಹೇಳಿದ್ದಾರೆ (sad news). “ನನ್ನ ತಂಗಿಯ ಸಾವಿಗೆ ಆಕೆಯ ಪತಿಯೇ ಕಾರಣ” ಎಂದು ಸವಿತಾಳ ಅಣ್ಣ ಮೋಹನ ನಾಯ್ಕ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಕ್ಷಣವೇ ಗಂಡನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಪ್ರಕರಣ ದಾಖಲಿಸಿಕೊಂಡು (case filed), ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: viral video/ ಬೈಕ್ ಸವಾರ ಮೃತಪಟ್ಟ ಸ್ಥಳದಲ್ಲೇ ಮತ್ತೊಂದು ಅಪಘಾತ !



